ದೇವಸ್ಥಾನಕ್ಕೆ ಹೋಗೋರೆಲ್ಲ ಹಿಂದುಗಳಲ್ಲ, ಮನುಷ್ಯತ್ವ ಇಲ್ಲದವ ಹಿಂದುವಾಗಲಾರ : CM ಸಿದ್ದರಾಮಯ್ಯ

ಬೆಂಗಳೂರು : ಅನ್ನಭಾಗ್ಯ ಯೋಜನೆಯ ಕುರಿತು ಕುಹಕವಾಡುತ್ತಿದ್ದವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯಿಂದ ಯಾರೂ ಸೋಮಾರಿಗಳಾಗಲ್ಲ. ಎಲ್ಲರೂ ಕಾಯಕ ಕೆಲಸ ಮಾಡಬೇಕು. ಜೊತೆಗೆ ಹಾಸೋಹವನ್ನೂ ಮಾಡಬೇಕು ಎಂದಿದ್ದಾರೆ.

ಇಷ್ಟು ದಿನ ದುಡಿದುಕೊಂಡು ತಿಂದವರು ಕೆಲ ದಿನ ದುಡಿಯದೇ ತಿಂದರೆ ಏನು ತಪ್ಪು ? ಎಂದು ಪ್ರಶ್ನಿಸಿರುವ ಸಿಎಂ, ಬಡವರು ಒಂದೆರಡು ದಿನ ವಿಶ್ರಾಂತಿ ಪಡೆದುಕೊಳ್ಳಲಿ ಬಿಡಿ ಎಂದಿದ್ದಾರೆ. ಸಂಪ್ರದಾಯದ ಹೆಸರಲ್ಲಿ ಕಂದಾಚಾರ. ಮೌಢ್ಯಗಳು ಹೆಚ್ಚುತ್ತಿವೆ. ನನ್ನ ಕಾರಿನ ಮೇಲೆ ಕಾಗೆ ಬಂದು ಕುಳಿತರೆ ಅದನ್ನು ಶನಿ ಕಾಟ ಎಂದರು. ಪಾಪ ಆ ಕಾಗೆಗೆ ಒಂದು ಕಣ್ಣು ಕಾಣುತ್ತಿರಲಿಲ್ಲ. ಆದ್ದರಿಂದ ನನ್ನ ಕಾರಿನ ಮೇಲೆ ಕುಳಿತಿತ್ತು. ಈ ಮೌಢ್ಯಗಳನ್ನು ತಡೆಯಲು ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ದೇವಸ್ಥಾನಕ್ಕೆ ಹೋಗುವವರೆಲ್ಲ ಹಿಂದುಗಳಲ್ಲ ಎಂದಿರುವ ಅವರು, ಮನುಷ್ಯತ್ವ ಇಲ್ಲದವನು ಹಿಂದೂ ಆಗಲಾರ. ಮಾಧ್ಯಮಗಳೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com