BJP ನಾಯಕ R ಅಶೋಕ್‌ಗೆ ಬಂಧನದ ಭೀತಿ : ಜೈಲು ಪಾಲಾಗ್ತಾರಾ ಮಾಜಿ DCM

ಬೆಂಗಳೂರು : ಬಿಜೆಪಿ ಮುಖಂಡ ಆರ್‌ ಅಶೋಕ್‌ ಅವರಿಗೆ ಬಂಧನದ ಭೀತಿ ಎದುರಾಗಿದೆ. ಬಗರ್‌ ಹುಕುಂ ಅಕ್ರಮ ಪ್ರಕರಣ ಸಂಬಂಧ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಿದ್ದು, ಅಶೋಕ್‌ ಭವಿಷ್ಯ ನಿರ್ಧಾರವಾಗಲಿದೆ.

ಎಸಿಬಿ ದಾಖಲಿಸಿರುವ ಎಫ್‌ಐಆರ್‌ ರದ್ದು ಮಾಡುವಂತೆ ಕೋರಿ ಅಶೋಕ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಕೋರ್ಟ್‌ ಅರ್ಜಿಯ ವಿಚಾರಣೆ ನಡೆಸಲಿದೆ. ಈಗಾಗಲೆ ಎಸಿಬಿ ತಂಡ ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದು, ಇಂದು ಅರ್ಜಿಯ ವಿಚಾರಣೆ ಬಳಿಕ ಅಶೋಕ್‌ ಜೈಲು ಪಾಲಾಗಲಿದ್ದಾರಾ ಎಂಬುದು ಖಚಿತವಾಗಲಿದೆ. ಅಶೋಕ್‌ ಅವರನ್ನು ಬಂಧಿಸುವ  ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಮುಗಿಯುವವರೆಗೂ ಎಸಿಬಿ ವಿಚಾರಣೆಗೆ ತಾತ್ಕಾಲಿಕ ತಡೆ ನೀಡುವಂತೆ ಅಶೋಕ್‌ ಪರ ವಕೀಲರು ಮನವಿ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆಗೆ ಕೋರ್ಟ್‌ ತಡೆ ನೀಡಿದರೆ ಅಶೋಕ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com