ವ್ಯಾಪಾರಿ ಮನೆಯಲ್ಲಿ ಪತ್ತೆಯಾಯ್ತು ದುಡ್ಡಿನ ಹಾಸಿಗೆ : 100 ಕೋಟಿಗೂ ಅಧಿಕ ಮೌಲ್ಯದ ಹಣ ಜಪ್ತಿ

ಕಾನ್ಪುರ : 500 ಹಾಗೂ 1000ರೂ ಮುಖಬೆಲೆಯ ನೋಟುಗಳು ಅಮಾನ್ಯಗೊಂಡು 1 ವರ್ಷ ಕಳೆದಿದ್ದರೂ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೋಟಿ ಕೋಟಿ ನೋಟುಗಳು ಪತ್ತೆಯಾಗಿವೆ. ಪ್ರಕರಣ ಸಂಬಂದ ಪೊಲೀಸರು 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾನ್‌ ಆದ ಕೋಟಿಗಟ್ಟಲೆ ನೋಟುಗಳು ಕಾನ್ಪುರದಲ್ಲಿ ವ್ಯಾಪಾರಿಯೊಬ್ಬರ ಮನೆಯಲ್ಲಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಈ ಮಾಹಿತಿಯನ್ನಾಧರಿಸಿ ಆರ್‌ಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ಮನೆಯ ಮೇಲೆ ದಾಳಿ ನಡೆಸಿದ್ದು. ಈ ವೇಳೆ ಬಹಳಷ್ಟು ಮೊತ್ತದ ಹಣ ಸಿಕ್ಕಿದೆ. ಇನ್ನೂ ಶೋಧ ಕಾರ್ಯ ಮುಂದುವರಿದಿದ್ದು. ಎಣಿಕೆ ಕಾರ್ಯ ನಡೆಸುತ್ತಿರುವುದಾಗಿ ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com