ಸೆಂಚುರಿಯನ್‌ನಲ್ಲೂ ಮುಖಭಂಗ ಅನುಭವಿಸಿದ ಕೊಹ್ಲಿ ಪಡೆ : ಸರಣಿ ಸೋಲು

ಸೆಂಚುರಿಯನ್‌ : ಐಸಿಸಿ ಟೆಸ್ಟ್‌ ರ್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀ ಇಂಡಿಯಾ ದಕ್ಷಿಣ ಆಫ್ರಿಕಾ ತಂಡದ ಎದುರು ಮುಖಭಂಗ ಅನುಭವಿಸಿದೆ. ದ. ಆಫ್ರಿಕಾ ವಿರುದ್ದ ನಡೆದ ಎರಡನೇ ಟೆಸ್ಟ್‌ನಲ್ಲೂ ಭಾರತ 135 ರನ್‌ಗಳ ಸೋಲನುಭವಿಸಿದೆ.

ಅಂತಿಮ ದಿನದಾಟದಲ್ಲಿ 287 ರನ್‌ಗಳ ಬೆನ್ನು ಹತ್ತಿದ ಭಾರತ ತಂಡ 50.2 ಓವರ್‌ಗಳಲ್ಲಿ 151 ರನ್‌ಗಳಿಗೆ ಆಲ್‌ ಔಟ್‌ ಆಗಿದೆ. ಆರಂಭದಲ್ಲಿ ಚೇತೇಶ್ವರ ಪೂಜಾರ -19, ಪಾರ್ಥಿವ್‌ ಪಟೇಲ್‌-19, ಹಾರ್ದಿಕ್‌ ಪಾಂಡ್ಯ-6 ಹಾಗೂ ರವಿಚಂದ್ರನ್ ಅಶ್ವಿನ್‌-3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಮೂಲಕ 87 ರನ್‌ ಗಳಿಸುವುದರೊಳಗೆ 7 ವಿಕೆಟ್‌ ಕಳೆದು ಕೊಂಡಿದ್ದ ಭಾರತ, ಬಳಿಕ ರೋಹಿತ್‌ ಶರ್ಮಾ ಹಾಗೂ ಮೊಹಮ್ಮದ್‌ ಶಮಿ ಅವರ ಜೊತೆಯಾಟದಿಂದ 54 ರನ್‌ ಕಲೆ ಹಾಕಿದರು.

47 ರನ್‌ ಗಳಿಸಿದ್ದ ರೋಹಿತ್‌ ರಬಾಡಾ ಅವರ ಬೌಲಿಂಗ್ ವೇಳೆ ಎಬಿಡಿ ಅವರ ಕ್ಯಾಚ್‌ಗೆ ಬಲಿಯಾದರು. ನಂತರ ಶಮಿ 28 ರನ್‌ ಗಳಿಸಿ ಔಟಾದರು. ಇನ್ನುಳಿದಂತೆ ಇಶಾಂತ್‌ ಶರ್ಮಾ-4, ಬೂಮ್ರಾ 2 ರನ್‌ ಗಳಿಸಿ ಔಟಾದರು.

ಕೇಪ್‌ಟೌನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತೀಯ ತಂಡ 72ರನ್‌ಗಳ ಅಂತರದಿಂದ ಸೋಲನುಭವಿಸಿತ್ತು. ಈ ಬಾರಿ ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ 135 ರನ್‌ಗಳ ಅಂತರದಿಂದ ಪರಾಭವ ಅನುಭವಿಸಿದೆ. ಇದರೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌ ಭೀತಿಯನ್ನು ಎದುರಿಸುತ್ತಿದೆ.

ಬ್ಯಾಟಿಂಗ್‌ ವೈಫಲ್ಯವೇ ತಂಡದ ಸೋಲಿಗೆ ಕಾರಣವಾಗಿದ್ದು, ಮುಂದಿನ ಪಂದ್ಯದಲ್ಲಾದರೂ ಗೆದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com