ಗೋವು ತಿನ್ನೋ CM ಸಿದ್ದರಾಮಯ್ಯ ಪಾಂಡವನಾ ? : ಆರ್ ಅಶೋಕ್‌

ರಾಮನಗರ : ಸಿಎಂ ಸಿದ್ದರಾಮಯ್ಯ ಯಾವಾಗಲೂ ನಿದ್ದೆಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ವಿರೋಧ ಪಕ್ಷದವರು ಇದ್ದಾರೆ ಎಂಬುದು ಗೊತ್ತಾಗುವುದಿಲ್ಲ ಎಂದು ಬಿಜೆಪಿ ಮುಖಂಡ ಆರ್‌. ಅಶೋಕ್‌ ಲೇವಡಿ ಮಾಡಿದ್ದಾರೆ.

ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿಎಂ ಮನೆಯಲ್ಲಿ, ವಿಧಾನಸೌಧದಲ್ಲಿ, ಕೊನೆಗೆ ವೇದಿಕೆಯಲ್ಲೂ ಮಲಗಿರುತ್ತಾರೆ. ಇನ್ನು ರಾಹುಲ್‌ ಗಾಂಧಿ ಎಲ್ಲೇ ಪ್ರಚಾರಕ್ಕೆ ಹೋದರೂ ಅಲ್ಲಿ ಸೋಲುತ್ತಿದ್ದಾರೆ.  ಅವರು ರಾಜ್ಯಕ್ಕೆ ಬಂದು ಇಲ್ಲಿ ಕಾಂಗ್ರೆಸ್‌ ಗೆಲ್ಲಿಸುತ್ತೇನೆ ಎಂದು ನಂಬಿದ್ದಾರೆ. ಇದು ಶುದ್ದ ಸುಳ್ಳು ಎಂದು ಅಶೋಕ್‌ ಹೇಳಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕಾಂಗ್ರೆಸ್‌ನವರು ಪಾಂಡವರು ಬಿಜೆಪಿಯವರು ಕೌರವರಿದ್ದಂತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಬಿಜೆಪಿಯವರು ನಿಜವಾದ ಪಾಂಡವರು, ಕಾಂಗ್ರೆಸ್‌ ಎಂದಿಗೂ ಕೌರವರು, ಅವರು ಗೋವು ತಿನ್ನುವ ರಾಕ್ಷಸರು. ಆದ್ದರಿಂದಲೇ ಗೋವು ತಿನ್ನುವ ಸಿದ್ದರಾಮಯ್ಯ ಪಾಂಡವರಾಗಲು ಸಾಧ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com