ಭಾರತೀಯ ರೆಸ್ಟೋರೆಂಟ್‌ನಿಂದ ವಿದೇಶಕ್ಕೆ ವಿಮಾನದಲ್ಲಿ ಚಿಕನ್‌ ಕರ್ರಿ ಡೆಲಿವರಿ..!!

ಪ್ಯಾರಿಸ್‌ : ಆನ್‌ ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡಿದರೇನೇ ಸಿಗುವುದು ಅನುಮಾನ ಅಂತಹದ್ದರಲ್ಲಿ ಇಂಗ್ಲೆಂಡ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ ಒಂದು ಖಾಸಗಿ ವಿಮಾನದಲ್ಲಿ ಚಿಕನ್ ಕರ್ರಿಯನ್ನು 500 ಕಿ.ಮೀ ದೂರಕ್ಕೆ ಸಾಗಿಸಿದೆ.

ಹೌದು ಇಂಗ್ಲೆಂಡ್‌ನ ಹ್ಯಾಂಪ್ ಶೈರ್‌ನಲ್ಲಿರುವ ಆಕಾಶ್‌ ಎಂಬ ಹಸರಿನ ರೆಸ್ಟೋರೆಂಟ್‌ನಿಂದ ಬ್ರಿಟೀಷ್‌ ವ್ಯಕ್ತಿ ಜೇಮ್ಸ್‌ ಎಂಬುವವರಿಗಾಗಿ ಈ ಚಿಕನ್‌ ಕರ್ರಿ ಹಾಗೂ ಅದರ ಜೊತೆ ಮತ್ತಷ್ಟು ಆಹಾರವನ್ನು ಫ್ರಾನ್ಸ್‌ನ ಬಾರ್ಡಿಯಾಕ್‌ ಎಂಬ ಪ್ರದೇಶಕ್ಕೆ ವಿಮಾನದಲ್ಲಿ ಕಳುಹಿಸಿಕೊಟ್ಟಿದ್ದಾರೆ.

100 ಚಿಕನ್‌ ಕರ್ರಿ ಜೊತೆಗೆ 170 ವಿವಿಧ ಖಾದ್ಯಗಳು, 75 ಪ್ಲೇಟ್‌ ಅನ್ನ, 100 ಹಪ್ಪಳ, 10 ಮಾವಿನ ಕಾಯಿ ಚಟ್ನಿಯನ್ನು ಆರ್ಡರ್ ಮಾಡಿದ್ದರು. ನಾನು 20 ವರ್ಷಗಳಿಂದ ಆಕಾಶ್ ರೆಸ್ಟೋರೆಂಟ್‌ನ ಗಿರಾಕಿಯಾಗಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲ ಫ್ರಾನ್ಸ್‌ನಲ್ಲಿ ಸರಿಯಾದ ಆಹಾರ ಸಿಗುವುದಿಲ್ಲ ಎಂದು ದೂರುತ್ತಿರುವುದಾಗಿ ಜೇಮ್ಸ್‌ ಹೇಳಿದ್ದಾರೆ.

ಆಕಾಶ್‌ ರೆಸ್ಟೋರೆಂಟ್‌ನ ಖಾದ್ಯಗಳನ್ನುಸವಿದ ಜೇಮ್ಸ್‌ ಗೆಳೆಯರು ಫುಲ್‌ ಫಿದಾ ಆಗಿದ್ದಾರಂತೆ. ಚಿಕನ್ ಕರಿ ಸೇರಿದಂತೆ ಇತರೆ ಖಾದ್ಯಗಳ ಬಿಲ್‌ 600 ರಿಂದ 700 ಪೌಂಡ್‌ ಅಂದರೆ 50ರಿಂದ 60 ಸಾವಿರವಾಗಿದೆ. ಇವರು ಸರಿಯಾಗಿ ಬಿಲ್‌ ಪಾವತಿಸುತ್ತಾರೆ. ಅಲ್ಲದೆ 12 ಪೌಂಡ್ಸ್‌ಗಿಂತ ಹೆಚ್ಚಿನ ಮೊತ್ತಡ ಆರ್ಡರ್‌ಗೆ ಫ್ರೀ ಡೆಲಿವರಿ ಮಾಡಲಾಗುತ್ತದೆ ಎಂದು ಆಕಾಶ್‌ ರೆಸ್ಟೋರೆಂಟ್‌ ಸಿಬ್ಬಂದಿ ಹೇಳಿದ್ದಾರೆ.

ಇನ್ನು ಚಿಕನ್ ಕರ್ರಿಯನ್ನು ಹೊತ್ತು ಸಾಗಿದ ವಿಮಾನದ ಬಾಡಿಗೆಯೇ 15 ಸಾವಿರ ಪೌಂಡ್‌ ಅಂದರೆ 13 ಲಕ್ಷವಾಗುತ್ತದೆ. ಆದರೆ ಸ್ಪಾನ್ಸರ್‌ಗಳು ಇದಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಆಕಾಶ್‌ ರೆಸ್ಟೋರೆಂಟ್‌ಗೆ ವಿದೇಶದಲ್ಲಿ ಭಾರೀ ಪಾಪ್ಯುಲಾರಿಟಿ ಸಿಕ್ಕಿದೆ.

ಇದರ ಫೋಟೋ ಹಾಗೂ ವಿಡಿಯೋಗಳು ಕರ್ರಿ ಬೈ ಏರ್‌ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರಸಾರವಾಗಿದೆ.

Leave a Reply

Your email address will not be published.