ಕಾಂಗ್ರೆಸ್‌ನವರಿಗೆ ಸರಿಯಾಗಿ ಕನ್ನಡ ಉಚ್ಛಾರ ಮಾಡಕ್ಕೆ ಬರುತ್ತಾ ಕೇಳಿ…. : ಪ್ರತಾಪ್‌ ಸಿಂಹ

ಕೊಪ್ಪಳ : ಮೋಸ ಎಂಬ ಪದಕ್ಕೆ ಅನ್ವರ್ಥಕ ಕಾಂಗ್ರೆಸ್. ಕಾಂಗ್ರೆಸ್ ಕೃಷ್ಣ ನದಿಕೊಳ್ಳ ಯೋಜನೆ ಗೆ ಪ್ರತಿ ವರ್ಷ 10 ಸಾವಿರ ಕೋಟಿ ಕೊಡ್ತೀವಿ ಅಂತಾ ಮೋಸ ಮಾಡಿದೆ ಎಂದು ಸಂಸದ ಪ್ರತಾಪ್‌ ಸಿಂಹ ಆರೋಪಿಸಿದ್ದಾರೆ.

ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರತಾಪ್‌ ಸಿಂಹ, ಬಿಜೆಪಿಗರು ಅಸಂವಿಧಾನಿಕ ಭಾಷೆ ಬಳಕೆ ಮಾಡ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ಸಿಗರಿಗೆ ಸರಿಯಾಗಿ ಕನ್ನಡ ಉಚ್ಚಾರ ಮಾಡೊಕ್ಕೆ ಬರುತ್ತಾ ಕೇಳಿ ನೋಡಿ. ನಾನು ಈ ವರೆಗೂ ಒಂದೂ ಅಸಂವಿಧಾನಿಕ ಭಾಷೆ ಬಳಸಿಲ್ಲ. ಸಿಎಂ ಸಿದ್ದರಾಮಯ್ಯರಿಗೆ ಏಕವಚನ ಬಳಕೆ ಬಿಟ್ಟು ಬೇರೇನು ಗೊತ್ತಿಲ್ಲ. ಸಿದ್ದರಾಮಯ್ಯ ಜನತಾ ಪಕ್ಷದದಲ್ಲಿದ್ದಾಗ ಸೋನಿಯಾ ಗಾಂಧಿಯವರಿಗೆ ಅವಳು, ಇವಳು ಅಂತ ಕರೆದಿದ್ದಾರೆ. ನಾವು ಕಾಂಗ್ರೆಸ್ ನವರಿಂದ ಸಂವಿಧಾನಿಕ ಭಾಷೆಯ ಬಗ್ಗೆ ಹೇಳಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ.

ಇನ್ನು ಗೋವಾ ಜಲಸಂಪನ್ಮೂಲ ಸಚಿವ ಕನ್ನಡಿಗರು ಹರಾಮ್ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ, ರಾಜ್ಯ ಸರ್ಕಾರ ಕಣಕುಂಬಿಯಲ್ಲಿ ಗೋವಾ ತಂಡಕ್ಕೆ ಫೋಟೋ ತಗೆಯಲು ಬಿಟ್ಟಿದ್ದೇಕೆ. ಅದೇನು ಪ್ರವಾಸಿ ತಾಣವಲ್ಲ. ರಾಜ್ಯ ಸರ್ಕಾರ ಇದರಲ್ಲಿ ನಿರ್ಲಕ್ಷ್ಯ ಮಾಡಿದೆ. ಗೋವಾ ಸಚಿವರ ಹೇಳಿಕೆಯನ್ನ ರಾಜ್ಯ ಬಿಜೆಪಿ ಖಂಡಿಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.