ಮಹಿಳಾ ಸೆಕ್ಯುರಿಟಿ ಗಾರ್ಡನ್ನು ಎಳೆದೊಯ್ದು ಅತ್ಯಾಚಾರ ಮಾಡಿ ಬಳಿಕ ನದಿಗೆ ಎಸೆದ ಕಾಮುಕರು !

ಹೈದರಾಬಾದ್‌ : ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸೆಕ್ಯುರಿಟಿ ಗಾರ್ಡ್‌ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದು ಬಳಿಕ ಕೆರೆಗೆ ಎಸೆದಿರುವ ಘಟನೆ ಆಂಧ್ರದಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಪ್ರಕಾಸಂ ಜಿಲ್ಲೆಯ ಸಂತಮಗಳೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಕನಕಮ್ಮ ಎಂದು ಗುರುತಿಸಲಾಗಿದೆ. ಕನಕಮ್ಮ ವೈಷ್ಣವಿ ಗ್ರಾನಿಟೆಸ್‌ ಎಂಬ ಅಂಗಡಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ರಾತ್ರಿ ಪಾಳಯದ ಕೆಲಸವಿದ್ದ ಕಾರಣ ಕೆಲಸಕ್ಕೆ ಹಾಜರಾಗಿದ್ದಾರೆ. ಈ ವೇಳೆ ಕಾಮುಕರು ಕುಡಿದ ಮತ್ತಿನಲ್ಲಿ ಕನಕಮ್ಮ ಅವರನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದು ಬಳಿಕ ಅವರ ಕತ್ತು ಹಿಸುಕಿ ಕೊಲೆ ಮಾಡಿ, ದೇಹವನ್ನು ನದಿಗೆ ಎಸೆದು ಪರಾರಿಯಾಗಿದ್ದಾರೆ.

ಬುದವಾರ ನದಿಯಲ್ಲಿ ಕನಕಮ್ಮ ಅವರ ಶವ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಶವವನ್ನು ಮೇಲೆತ್ತಿದ್ದು, ಶವದ ಮೈತುಂಬಾ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಪ್ರಕಾಸಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com