ಸಿನಿಮಾ ಸ್ಟೈಲಲ್ಲಿ ಮತ್ತೆ ಒಂದಾದ ಅಣ್ಣ ತಂಗಿ : ಹಾಸನದಲ್ಲೊಂದು ಮನಕಲಕುವ Story

ಹಾಸನ : ಸಿನಿಮಾ ಕಥೆಯನ್ನೇ ನಾಚಿಸುವಂತೆ ಅಣ್ಣ-ತಂಗಿಯರಿಬ್ಬರು ದಶಕಗಳ ನಂತರ ಮತ್ತೆ ಒಂದಾದ ಅಪರೂಪದ ಘಟನೆ ಹಾಸನದಲ್ಲಿ ನಡೆದಿದೆ. ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು, ಸಂಬಂಧಿಕರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿ ಪಾಲಾಗಿದ್ದ ಅಣ್ಣ ತಂಗಿ ಇದೀಗ ಮತ್ತೆ ಒಂದಾಗಿದ್ದಾರೆ.

ಇವರಿಬ್ಬರೂ ಚಿಕ್ಕವರಿದ್ದಾಗ ನೋಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಚಿಕ್ಕಮ್ಮ ಹೊಳೆನರಸೀಪುರದ ಮಳಲಿ ಗ್ರಾಮದ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದರು. ಅಲ್ಲೇ ದೇವಸ್ಥಾನದ ಪ್ರಸಾದ ತಿಂದು ಎರಡು ದಿನ ದೂಡಿದ ಬಳಿಕ ಮೂರನೇ ದಿನ ಪ್ರಸಾದ ಸಿಗಲಿಲ್ಲ. ಈ ಮಕ್ಕಳ ಸ್ಥಿತಿ ನೋಡಿದ ಗ್ರಾಮದ ಶಿಕ್ಷಕ ಗೌಡೇ ಗೌಡ ಎಂಬುವವರು ಮಕ್ಕಳಿಗೆ ಆಶ್ರಯ ನೀಡಿದ್ದರು.

ಆಗ ಇಬ್ಬರು ಮಕ್ಕಳಿರುವುದನ್ನು ನೋಡಿದ ಗ್ರಾಮದ ಮಹಿಳೆಯೊಬ್ಬರು ಬಾಲಕಿಯನ್ನು ಸಾಕುವುದಾಗಿ ಕರೆದೆುಕೊಂಡು ಹೋಗಿದ್ದರು. ಆದರೆ ಕರೆದುಕೊಂಡು ಹೋದ ಬಳಿಕ ಮಗುವನ್ನು ಸಕಲೇಶಪುರದ ಕಾಫಿ ತೋಟದ ಮಾಲೀಕನಿಗೆ ಮಾರಿ ಬಾಲಕಿ ಕಾಣೆಯಾಗಿದ್ದಾಳೆ ಎಂದು ನಾಟಕವಾಡಿದ್ದಳು.

ಎಸ್ಟೇಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗಿಗೆ ಕಿರುಕುಳ ಹೆಚ್ಚಾದಾಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳುಯ ಬಳಿಕ ಆಕೆಗೆ ಮಕ್ಕಳ ರಕ್ಷಣಾ ಸಮಿತಿ ಯವರು  ಆಶ್ರಯ ನೀಡಿ ಆಕೆಯ ಬಳಿ ವಿಚಾರಿಸಿದಾಗ ತನ್ನ ಬಾಲ್ಯದ ಕಥೆಯನ್ನು ಬಾಲಕಿ ಹೇಳಿದ್ದಾಳೆ. ಮಾಹಿತಿ ಆಧರಿಸಿ ಅಣ್ಣನನ್ನು ಹುಡುಕಲಾಗಿದ್ದು, ಅಣ್ಣನಿದ್ದ ಮನೆಯ ವಿಳಾಸ ಸಿಕ್ಕಿದೆ.

ಅಣ್ಣ ಮಂಜುನಾಥನನ್ನು ಚೆನ್ನಾಗಿ ನೋಡಿಕೊಂಡಿದ್ದ ಗೌಡರು ಆರು ತಿಂಗಳ ಹಿಂದಷ್ಟೇ ಸಾವಿಗೀಡಾಗಿದ್ದರು. ಅವರ ಮಗ ತೇಜಸ್ವಿ ಮಂಜುನಾಥನ ಹೊಣೆ ಹೊತ್ತು ಸಾಕುತ್ತಿದ್ದು, ಮಂಜುನಾಥ ಈಗ 10ನೇ ತರಗತಿ ಓದುತ್ತಿದ್ದಾನೆ.

ಮಕ್ಕಳ ಕಲ್ಯಾಣ ಸಮಿತಿ ಪ್ರಯತ್ನದಿಂದಾಗಿ ಬೇರೆ ಬೇರೆಯಾಗಿದ್ದ ಅಣ್ಣ ತಂಗಿ ಮತ್ತೆ ಒಂದಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com