Cricket : ಆರಂಭಿಕ ಆಘಾತ ನೀಡಿದ ಆಫ್ರಿಕಾ : ಸಂಕಷ್ಟದಲ್ಲಿ ಕೊಹ್ಲಿ ಪಡೆ

ಸೆಂಚುರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. 287 ರನ್ ಗುರಿಯನ್ನು ಬೆನ್ನತ್ತಿರುವ ಭಾರತ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ 35 ಕ್ಕೆ 3 ವಿಕೆಟ್ ಕಳೆದುಕೊಂಡು ಸರಣಿ ಸೋಲಿನ ಭೀತಿ ಎದುರಿಸುತ್ತಿದೆ.

ಭಾರತದ ಮುರಳಿ ವಿಜಯ್, ಕೆ ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಎರಡಂಕಿಯನ್ನೂ ತಲುಪದೇ ನಿರ್ಗಮಿಸಿದರು. ದಿನದಾಟಸ ಮುಕ್ತಾಯದ ಹೊತ್ತಿಗೆ ಚೇತೆಶ್ವರ ಪೂಜಾರಾ (11*) ಹಾಗೂ ಪಾರ್ಥಿವ್ ಪಟೇಲ್ (5*) ಅಜೇಯರಾಗುಳಿದಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 258ಕ್ಕೆ ಆಲೌಟ್ ಆಯಿತು. ಆತಿಥೇಯರ ಪರವಾಗಿ ಎಬಿ ಡಿವಿಲಿಯರ್ಸ್ 80, ಫ್ಯಾಫ್ ಡು ಪ್ಲೆಸಿಸ್ 48 ಹಾಗೂ ಡೀನ್ ಎಲ್ಗರ್ 61 ರನ್ ಗಳಿಸಿದರು. ಭಾರತದ ಮಹಮ್ಮದ್ ಶಮಿ 4, ಜಸ್ಪ್ರೀತ್ ಬುಮ್ರಾ 3, ಇಶಾಂತ್ ಶರ್ಮಾ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com