ಪುಕ್ಕಟೆ ಸೀರೆಗೆ ಮುಗಿಬಿದ್ದ ಮಹಿಳೆಯರು : ಬೀದರ್‌ನಲ್ಲಿ 5 ಲಕ್ಷ ಸೀರೆ ಮಾರಾಟ

ಬೀದರ್‌ : ಪುಕ್ಕಟೆ ಸಿಕ್ಕರೆ ಏನನ್ನೂ ಬಿಡಲ್ಲ ಎಂಬುದು ಲೋಕರೂಢಿಯ ಮಾತು. ಇದೇ ಮಾತು ಬೀದರ್‌ನಲ್ಲಿ ಚರ್ಚೆಯಾಗುತ್ತಿದೆ. ಬೀದರ್‌ನಲ್ಲಿ ಈ ಹಿಂದೆ 1ರೂ, 2 ರೂಗೆ ಸೀರೆ ವಿತರಿಸಿ ಸುದ್ದಿಯಾಗಿದ್ದ ಸೃಷ್ಠಿ ಸ್ಯಾರಿ ಸೆಂಟರ್‌ನ ಚಂದ್ರಶೇಖರ್‌ ಪಸರ್ಗೆ ಮತ್ತೆ ಸುದ್ದಿಯಲ್ಲಿದ್ದು, ಮಹಿಳೆಯರಿಗೆ 5 ಲಕ್ಷ ಸೀರೆಗಳನ್ನು ಕೇವಲ 1 ಹಾಗೂ 2 ರೂಗೆ ಮಾರಾಟ ಮಾಡುತ್ತಿದ್ದಾರೆ.

ಬೀದರ್‌ನ ಉತ್ತರ ಕ್ಷೇತ್ರಜ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಚಂದ್ರಶೇಖರ ಪಸರ್ಗೆ ಅವರು, ಎಚ್‌. ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿ ಎಂಬ ಕಾರಣಕ್ಕೆ 5 ಲಕ್ಷ ಸೀರೆಗಳನ್ನು ಹಂಚಿದ್ದಾರೆ. ವೋಟರ್‌ ಐಡಿ ತೋರಿಸಿದವರಿಗೆ ಉಚಿತವಾಗಿ ಸೀರೆ ನೀಡುತ್ತಿದ್ದಾರೆ.

ಜನವರಿ 15ರಿಂದ 30ರವರೆಗೆ 150, 200, 250 ಬೆಲೆಯ 5 ಲಕ್ಷ ಸೀರೆಗಳನ್ನು 1 ಹಾಗೂ 2 ರೂನಂತೆ ಮಾರುತ್ತಿದ್ದಾರೆ. ಸುದ್ದಿ ತಿಳಿದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೀರೆ ಖರೀದಿಗೆ ಮುಗಿಬಿದ್ದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com