ಕಿಚ್ಚ ಸುದೀಪ್‌ ಬಗ್ಗೆ HDK ಅಭಿಪ್ರಾಯ…. : ಕೇಳಿದ್ರೆ ಸಂತೋಷ ಪಡೋದಂತೂ ಸತ್ಯ…

ಬೀದರ್​ : ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುರಿತು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕಿಚ್ಚ ರಾಜಕೀಯ ಪ್ರವೇಶ ವಿಚಾರ ಕುರಿತಂತೆ ಮಾತನಾಡಿದ ಎಚ್‌ಡಿಕೆ, ಸುದೀಪ್​ ಜೊತೆ ಸೌಹಾರ್ದಿತವಾದ ಭೇಟಿ ಮಾಡಲಾಗಿತ್ತು. ಚಿತ್ರರಂಗದಲ್ಲಿ ಬಹಳಷ್ಟು ಸಾಧನೆ ಮಾಡುವಂತ ಭಾವನೆ ಇಟ್ಟುಕೊಂಡಿದ್ದಾರೆ. ಅಂತಹ ಒಬ್ಬ ಉತ್ತಮ ಕಲಾವಿದನಿಗೆ ರಾಜಕೀಯಕ್ಕೆ ಎಳೆದು ಅವರ ಭವಿಷ್ಯಕ್ಕೆ ಹಾನಿ ಮಾಡುವಂತ ಸಣ್ಣತನ ನನಗಿಲ್ಲ. ಅವರ ಜೊತೆ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದೇನೆ. ಇದನ್ನ ಹೊರತು ಪಡಿಸಿ ಸಂಪೂರ್ಣವಾಗಿ ನಮ್ಮ ಜೊತೆಗೆ ಬರುವಂತೆ ಒತ್ತಡ ಹಾಕಿಲ್ಲ. ರಾಜ್ಯದಲ್ಲಿನ ಹಲವಾರು ಸಮಸ್ಯೆ ಬಗ್ಗೆ ದ್ವನಿಗೂಡಿವಂತೆ ಮನವಿ ಮಾಡಿದ್ದೇನೆ ಹೊರತು ರಾಜಕೀಯಕ್ಕೆ ಧುಮುಕಲೇಬೇಕೆಂದು ಒತ್ತಡ ಹಾಕಿಲ್ಲ ಎಂದಿದ್ದಾರೆ.

Leave a Reply

Your email address will not be published.