ಬಾಹುಬಲಿ – ದೇವಸೇನಾಳಿಗಾಗಿಯೇ ಸಿದ್ಧವಾಗಿದೆ ಹೊಸ ರೊಮ್ಯಾಂಟಿಕ್‌ Love Story

ಬಾಹುಬಲಿ ಸಿನಿಮಾದ ಮೂಲಕ ಎಲ್ಲರ ಮನಗೆದ್ದಿದ್ದ ಅನುಷ್ಕಾ ಪ್ರಭಾಸ್ ಮತ್ತೆ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಅವರಿಗಾಗಿಯೇ ಲವ್‌ ಸ್ಟೋರಿಯೊಂದು ಸಿದ್ಧವಾಗಿದ್ದು, ಈಗಾಗಲೆ ಚಿತ್ರೀಕರಣ ಶುರುವಾಗಿದೆ.

ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್‌ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಹೋ ಸಿನಿಮಾಗೆ ಹಿರೋಯಿನ್ ಆಯ್ಕೆಗೂ ಮುನ್ನ ಅನುಷ್ಕಾ ಈ ಸಿನಿಮಾದ ನಾಯಕಿಯಾಗಿ ಅಭಿನಯಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಸಾಹೋ ಸಿನಿಮಾಗೆ ಶ್ರದ್ಧಾ ನಾಯಕಿಯಾಗಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ಆದರೆ ಈ ಜೋಡಿಯನ್ನು ಮತ್ತೆ ನೋಡಬೇಕು ಎಂದುಕೊಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈಗಾಗಲೆ ಇವರಿಬ್ಬರಿಗಾಗಿ ಪಕ್ಕಾ ಲವ್‌ ಸ್ಟೋರಿಯೊಂದು ಸಿದ್ದವಾಗಿದ್ದು, ಸಾಹೋ ಸಿನಿಮಾದ ಜೊತೆ ಜೊತೆಗೇ ಈ ಸಿನಿಮಾದ ಶೂಟಿಂಗ್‌ ನಡೆಯಲಿದೆ.

ಈ ಸಿನಿಮಾಗೆ ರಾಧಾಕೃಷ್ಣ ಕುಮಾರ್‌ ನಿರ್ದೇಶನ ಮಾಡಲಿದ್ದಾರೆ.ಇದೊಂದು ರೊಮ್ಯಾಂಟಿಕ್‌ ಸಿನಿಮಾವಾದ ಕಾರಣ ಪ್ರಭಾಸ್‌ಗೆ ಅನುಷ್ಕಾಳೇ ಸರಿಯಾದ ಜೋಡಿ ಎಂದು ರಾಧಾಕೃಷ್ಣ ನಿರ್ಧರಿಸಿ ಆಕೆಯನ್ನೇ ಆಯ್ಕೆಮಾಡಿದ್ದಾರಂತೆ.

Leave a Reply

Your email address will not be published.

Social Media Auto Publish Powered By : XYZScripts.com