ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಗೋಮೂತ್ರದಿಂದ ಶುದ್ದ ಮಾಡಿದ BJP !

ಶಿರಸಿ : ನಟ ಪ್ರಕಾಶ್‌ ರೈ ಅವರು ಇತ್ತೀಚೆಗಷ್ಟೇ ಶಿರಸಿಯಲ್ಲಿ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂಬ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಅವರು ಭಾಗವಹಿಸಿದ್ದ ವೇದಿಕೆಯನ್ನು ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ಗೋಮೂತ್ರ  ಸಿಂಪಡಿಸಿ ಶುದ್ಧಗೊಳಿಸಿದ್ದಾರೆ.

ಶಿರಸಿಯ ಶ್ರೀ ರಾಘವೇಂದ್ರ ಮಠದ ಸಭಾ ಮಂಟಪದಲ್ಲಿ ಪ್ರೀತಿ ಪದಗಳ ಪಯಣ ಎಂಬ ಸಂಘಟನೆಯೊಂದು ವಿಚಾರಗೋಷ್ಠಿ ಏರ್ಪಡಿಸಿತ್ತು. ಈ ಸಮಾರಂಭವನ್ನು ನಟ ಪ್ರಕಾಶ್‌ರೈ ಉದ್ಘಾಟಿಸಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವೇದಿಕೆಯನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ್‌ ಮರಾಠೆ, ಸ್ವಯಂ ಘೋಷಿತ ಬುದ್ದಿಜೀವಿಗಳು, ಸೋಗಲಾಡಿ ಹಾಗೂ ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ ವೇದಿಕೆಯನ್ನು ಅಪವಿತ್ರಗೊಳಿಸಿದ್ದಾರೆ. ಆದ ಕಾರಣ ಶುದ್ಧ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಹಿಂದೂ ಧರ್ಮೀಯರು ಗೋವನ್ನು ಪೂಜನೀಯವಾಗಿ ನೋಡುತ್ತಾರೆ. ಗೋಮಾಂಸ ತಿನ್ನುವ, ಹಿಂದೂ ದೇವರಿಗೆ ಅವಮಾನ ಮಾಡುವ ವ್ಯಕ್ತಿಗಳು ಶಿರಸಿಗೆ ಆಗಮಿಸಿರುವುದರಿಂದ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ರೈನನ್ನು ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಇಂತಹವರನ್ನು ಪರಿಗಣನೆಗೇ ತೆಗೆದುಕೊಳ್ಳಬಾರದು ಎಂದಿದ್ದಾರೆ.

Leave a Reply

Your email address will not be published.