Cricket : 150 ರನ್‌ ಗಳಿಸ್ತಿದ್ದಂತೆ ಅನುಷ್ಕಾಳನ್ನು ನೆನಪಿಸಿಕೊಂಡ ಕೊಹ್ಲಿ ಮಾಡಿದ್ದೇನು…?

ಸೆಂಚುರಿಯನ್‌ : ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸೆಂಚುರಿಯನ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ 153 ರನ್ ಗಳಿಸಿದ್ದಾರೆ. 150 ರನ್‌ ಗಳಿಸುತ್ತಿದ್ದಂತೆ ಕೊಹ್ಲಿಗೆ ಪತ್ನಿ ಅನುಷ್ಕಾ ನೆನಪಾಗಿದ್ದು, ಮೈದಾನದಲ್ಲಿಯೇ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಈ ಬಾರಿ ಪಂದ್ಯದಲ್ಲಿ 89ನೇ ಓವರ್‌ನಲ್ಲಿ 150 ರನ್ ಗಳಿಸಿದ ಕೂಡಲೆ ಕೊಹ್ಲಿ ಕುತ್ತಿಗೆಗೆ ಹಾಕಿದ್ದ ನಿಶ್ಚಿತಾರ್ಥದ ಉಂಗುರವನ್ನು ತೆಗೆದು ಅದಕ್ಕೆ ಮುತ್ತಿಟ್ಟಿದ್ದಾರೆ.

ಈ ಹಿಂದೆ ಕೇಪ್‌ಟೌನ್‌ನಲ್ಲಿ ಭಾರತ -ದಕ್ಷಿಣ ಆಫ್ರಿಕಾ ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ ಕಳಪೆಯಾಟ ಪ್ರದರ್ಶಿಸಿದ್ದರು. ಈ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಸಹ ಕ್ರೀಡಾಂಗಣದಲ್ಲಿದ್ದರು. ಅಂದು ಅನುಷ್ಕಾ, ಕೊಹ್ಲಿ ಜೊತೆಗಿದ್ದದ್ದಕ್ಕೇ ಕೊಹ್ಲಿ ಸರಿಯಾಗಿ ಆಟವಾಡಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಅನುಷ್ಕಾ ವಿರುದ್ದ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಎರಡನೇ ಟೆಸ್ಟ್‌ನಲ್ಲಿ ಕೊಹ್ಲಿ 150 ರನ್‌ ಗಳಿಸಿ ಅನುಷ್ಕಾ ವಿರುದ್ದ ಮಾತನಾಡಿದ್ದವರಿಗೆ ತಿರುಗೇಟು ನೀಡಿದ್ದಾರೆ.

 


Leave a Reply

Your email address will not be published.

Social Media Auto Publish Powered By : XYZScripts.com