Social Media ದಲ್ಲಿ ವೈರಲ್ ಆಗ್ತಿದೆ ಇಲಿಯಾಸ್‌ ಪತ್ನಿ ಹೆಸರಿನಲ್ಲಿ ಬರೆದ ಪತ್ರ !

ಮಂಗಳೂರು : ಟಾರ್ಗೆಟ್ ಗ್ರೂಪ್ ಇಲಿಯಾಸ್ ಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಇಲಿಯಾಸ್ ಪತ್ನಿ ಫರ್ಜಾನಾ ಅವರ ಹೆಸರಿನ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ದಾವೂದ್‌, ಸಫ್ವಾನ್‌ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯನೊಬ್ಬನ ಹೆಸರು ಉಲ್ಲೇಖವಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಇಲಿಯಾಸ್‌ ಪತ್ನಿ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಲ್ಲದೆ ದಾವೂದ್‌ ತನ್ನನ್ನು ಕೊಲ್ಲಲು ಸಂಚು ಹೂಡಿದ್ದಾನೆ. ಆತನಿಗೆ ಸಫ್ವಾನ್‌, ಉಸ್ಮಾನ್‌ ಕಲ್ಲಾಪು, ರಹೀಮ್‌ ಮಂಚಿಲ ಅವರ ಬೆಂಬಲವಿದೆ. ಆದರೆ ತಾನು ಮಾತ್ರ ಇನ್ನು ಯಾವುದೇ ಜಗಳ ಮಾಡಲ್ಲ ಎಂದು ಇಲಿಯಾಸ್‌ ಕೆಲ ದಿನಗಳ ಹಿಂದೆ ಹೇಳಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನನಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ ನನ್ನ ಸಾವಿಗೆ ನೀವೇ ಹೊಣೆಯಾಗುತ್ತೀರಿ ಎಂದು ಫರ್ಜಾನಾ ಹೆಸರಲ್ಲಿ ಬರೆದಿರುವ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ ಈ ಪತ್ರವನ್ನು ಇಲಿಯಾಸ್‌ ಪತ್ನಿಯೇ ಬರೆದಿದ್ದಾರಾ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಮಧ್ಯೆ ಪೊಲೀಸರು ಫರ್ಜಾನಾ ಹಾಗೂ ಇಲಿಯಾಸ್‌ ತಾಯಿಯ ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.