ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿದ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು Rape ಮಾಡೇಬಿಟ್ಟ !

ಕೋಲಾರ : ಅಕ್ಕ ಗರ್ಭಿಣಿಯಾಗಿದ್ದ ಕಾರಣ ಆಕೆಗೆ ಸಹಾಯ ಮಾಡಲೆಂದು ಬಂದ ತಂಗಿಯ ಮೇಲೆ ಭಾವನೇ ಕಾಮದ ಕಣ್ಣು ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. 32 ವರ್ಷದ, ಇಬ್ಬರು ಮಕ್ಕಳ ತಂದೆಯೇ ಕೃತ್ಯ ಎಸಗಿದ್ದಾನೆ. ಕೋಲಾರದ ಮಾಲೂರಿು ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಎರಡು ದಿನಗಳ ಹಿಂದೆ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗರ್ಭಿಣಿಯಾಗಿದ್ದ ತನ್ನ ಅಕ್ಕನಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ತಂಗಿಯನ್ನು ಮನೆಗೆ ಕರೆಸಿಕೊಂಡದ್ದರು. ಆದರೆ ಗರ್ಭಿಣಿಯ ಗಂಡನೇ ಬಾಲಕಿಯ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ  ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಹೇಳಿದ್ದಾಳೆ. ಅಲ‌್ಲದೆ ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದು, ಬಳಿಕ ಆತ ಪರಾರಿಯಾಗಿದ್ದಾನೆ.

ಭಾನುವಾರ ಪ್ರಕರಣ ಸಂಬಂಧ ಮಾಸ್ತಿ ಪೊಲೀಸ್‌ ಠಾಣೆಗೆ  ದೂರು ನೀಡಿದರೂ ಪೊಲೀಸರು ಸ್ವೀಕರಿಸಲಿಲ್ಲ ಎನ್ನಲಾಗಿದೆ. ಬಳಿಕ ಸೋಮವಾರ ಬಾಲಕಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com