ತ್ರಿಬಲ್‌ ರೈಡಿಂಗ್ ಹೋಗಿದ್ದೇ ತಪ್ಪಾಯ್ತು, ಅದಕ್ಕೆ ಪೊಲೀಸ್ ಪೇದೆ ಮಾಡಿದ್ದೇನು….?

ಕಲಬುರಗಿ : ಇಂದಿನ ಯುವಕರು ಎಂದ ಮೇಲೆ ಬೈಕ್‌ನಲ್ಲಿ ಸ್ನೇಹಿತರು ಜೊತೆ ಇಬ್ಬರು ಮೂವರು ಓಡಾಡುವುದು ಸಾಮಾನ್ಯ. ಅಂತೆಯೇ ಯುವನೊಬ್ಬ ತನ್ನ ಸ್ನೇಹಿತರ ಜೊತೆ ತ್ರಿಬಲ್‌ರೈಡಿಂಗ್‌ ಹೋಗಿದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಪೇದೆಯೊಬ್ಬ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಕೊಂಡಿದ್ದಾನೆ.

ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಘಟನೆ ನಡೆದಿದ್ದು, ಯುವಕ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾವೆ. ಮೃತ ಯುವಕನನ್ನು ರಮೇಶ್‌ ಎಂದು ಗುರುತಿಸಲಾಗಿದ್ದು, ಈತ ಜೇವರ್ಗಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ.

ಕೆಲ ದಿನಗಳ ಹಿಂದೆ ಯುವಕ ತ್ರಿಬಲ್‌ ರೈಡಿಂಗ್ ಹೋಗಿದ್ದ ವೇಳೆ, ಮಲ್ಲು ಬಾಸಗಿ ಎಂಬ ಪೇದೆ ಪ್ರತಿನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com