ಗೋವಾ ಬೀಚ್‌ನಲ್ಲಿ ಪತ್ತೆಯಾಯ್ತು ಮಲೆಯಾಳಂ ನಟ ಸಿಧು ಮೃತದೇಹ

ಪಣಜಿ : ಮಲೆಯಾಳಂನ ಯುವ ನಟ ಸಿಧು ಆರ್‌.ಪಿಳ್ಳೈ ಅವರ ಮೃತದೇಹ ಗೋವಾದ ಬೀಚ್‌ನಲ್ಲಿ ಪತ್ತೆಯಾಗಿದೆ. 2012ರಲ್ಲಿ ಬಿಡುಗಡೆಯಾಗಿದ್ದ ಸೂಪರ್‌ ಹಿಟ‌ ಸೆಕೆಂಡ್‌ ಶೋ ಸಿನಿಮಾದ ಮೂಲಕ ಸಿಧು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಸಿಧು (27) ಜನವರಿ 12ರಂದು ಗೋವಾಗೆ ತೆರಳಿದ್ದು, ಈಗ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಮಲೆಯಾಳಂ ಮನೋರಮಾ ಪತ್ರಿಕೆ ವರದಿ ಮಾಡಿದೆ. ಇವರು ಸೆಕೆಂಡ್‌ ಶೋ ಸಿನಿಮಾದಲ್ಲಿ ದಲ್ಕ್ವೆರ್‌ ಸಲ್ಮಾನ್ ಅವರೊಂದಿಗೆ ನಟಿಸಿದ್ದರು. ಸಿಧು ಸಾವಿಗೆ ಸಲ್ಮಾನ್‌ ಟ್ವೀಟ್‌ ಮಾಡಿದ್ದು, ಸಿಧು ಸಾವು ನೋವು ತಂದಿರುವದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com