ನ್ಯಾಯಾಂಗ ವ್ಯವಸ್ಥೆಯ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ : ಅಟಾರ್ನಿ ಜನರಲ್‌

ದೆಹಲಿ  : ಸುಪ್ರೀಂ ಕೋರ್ಟ್‌ನ ಬಿಕ್ಕಟ್ಟು ಬಗೆಹರಿದಂತೆ ಕಾಣುತ್ತಿಲ್ಲ ಎಂದು ಅಟಾರ್ನಿ ಜನರಲ್‌ಕೆ.ಕೆ ವೇಣುಗೋಪಾಲ್ ಹೇಳಿದ್ದು, ಇನ್ನೆರಡು ದಿನಗಳಲ್ಲಿ ಬಗೆಹರಿಯುವ ಭರವಸೆ ಇರುವುದಾಗಿಯೂ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಜ. ಚಲಮೇಶ್ವರ್‌, ರಂಜನ್‌ ಗೋಗೋಯ್‌, ಮದನ್ ಬಿ ಲೋಕೂರ್‌ ಹಾಗೂ ಕುರಿಯನ್‌ ಜೋಸೆಫ್, ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ದೀಪಕ್‌  ಮಿಶ್ರಾ ವಿರುದ್ದ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಳಿಕ ಸೋಮವಾರ ಕಲಾಪಗಳಿಗೆ ಹಾಜರಾಗಿದ್ದರು. ಆದ ಕಾರಣ ಎಲ್ಲಾ ಬಿಕ್ಕಟ್ಟು ಶಮನವಾಗಿದೆ ಎಂದು ಭಾರತೀಯ ವಕೀಲರ ಸಂಘ ತಿಳಿಸಿತ್ತು. ಆದರೆ ಅಟಾರ್ನಿ ಜನರಲ್‌ ಮಾತ್ರ ವಿವಾದ ಇನ್ನೂ ಬಗೆಹರಿದಿಲ್ಲ ಎಂದಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com