ಇನ್ಮುಂದೆ Online ನಲ್ಲೂ ಮಾರಾಟವಾಗಲಿವೆ ಪತಂಜಲಿ ಉತ್ಪನ್ನಗಳು

ದೆಹಲಿ : ಭಾರತದ ಮಾರುಕಟ್ಟೆಯಲ್ಲಿ ಬಹುಪಾಲನ್ನು ಹೊಂದಿರುವ ಸ್ವದೇಶಿ ಉತ್ಪನ್ನ ಪತಂಜಲಿ ಇನ್ನು ಮುಂದೆ ಆನ್‌ಲೈನ್‌ನಲ್ಲೂ ಲಭ್ಯವಾಗಲಿದೆ.

ಫ್ಲಿಪ್‌ ಕಾರ್ಟ್‌, ಅಮೇಜಾನ್‌, ನೆಟ್‌ ಮೆಡ್ಸ್‌, ಶಾಪ್‌ ಕ್ಲೂಸ್‌, ಪೇಟಿಎಂ, ಗ್ರೋಫರ್ಸ್‌, 1 ಎಂಜಿ ಸೇರಿದಂತೆ ಇತರೆ ಆನ್‌ ಲೈನ್‌ ಶಾಪಿಂಗ್‌ ತಾಣಗಳಲ್ಲೂ ಪತಂಜಲಿ ಉತ್ಪನ್ನ ಮಾರಾಟವಾಗಲಿದೆ.

ಇಷ್ಟು ದಿನ ಕೇವಲ ರೀಟೇಲ್‌ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲೂ ವಿಸ್ತರಿಸುವ ಸಲುವಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವುದಾಗಿ ಬಾಬಾ ರಾಂದೇವ್‌ ಹೇಳಿದ್ದಾರೆ.

ಇನ್ನು ಈ ಕುರಿತು ಪತಂಜಲಿ ಸಂಸ್ಥೆಯ ಸಿಇಒ ಬಾಲಕೃಷ್ಣ ಹೇಳಿಕೆ ನೀಡಿದ್ದು, ಕೆಲಮೊಮ್ಮೆ ಗ್ರಾಹಕರಿಗೆ ರೀಟೇಲ್‌ ಅಂಗಡಿಗಳಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸುವಷ್ಟು ಸಮಯವಿರುವುದಿಲ್ಲವೋ ಅಂತಹವರಿಗಾಗಿ ಆನ್‌ಲೈನ್‌ ಶಾಪಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಮತ್ತೊಂದೆಡೆ ಫ್ರಾನ್ಸ್‌ ಮೂಲದ ಮೊಯೆಟ್‌ ಹೆನ್ನಸ್ಸಿ ಲೂಯಿ ವಿಟ್ಟೋನ್ ಹೆಸರಿನ ಸಂಸ್ಥೆಯೊಂದು ಪತಂಜಲಿ ಸಂಸ್ಥೆಗೆ ಹೂಡಿಕೆ ಮಾಡಲು ಮುಂದೆ ಬಂದಿದ್ದು, 3250 ಕೋಟಿ ರೂ ಹೂಡಿಕೆ ಮಾಡುವುದಾಗಿ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com