ದೇಶದ ಮುಸ್ಲೀಮರಿಗೆ ಬಿಗ್‌ ಶಾಕ್‌ ಕೊಟ್ಟ ಮೋದಿ ಸರ್ಕಾರ…..ಏನದು ?

ದೆಹಲಿ : ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ ಸರ್ಕಾರ ದೇಶದ ಮುಸ್ಲೀಮರಿಗೆ ಶಾಕ್‌ ನೀಡಿದೆ. ಇಷ್ಟು ದಿನ ಮುಸ್ಲೀಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ನಡೆಯುವ ಹಜ್‌ ಯಾತ್ರೆಗೆ ಹೋಗಲು ಯಾತ್ರಿಕರಿಗೆ ನೀಡುತ್ತಿದ್ದ ಸಬ್ಸೀಡಿಯನ್ನು ರದ್ದುಗೊಳಿಸಿದೆ.

ಈ ಕುರಿತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಮಾಹಿತಿ ನೀಡಿದ್ದು, ಹಜ್‌ ಯಾತ್ರಿಕರಿಗೆ ಈ ಬಾರಿ ಸಬ್ಸೀಡಿ ನೀಡಲಾಗುವುದಿಲ್ಲ. ಒಟ್ಟು 1.75 ಲಕ್ಷ ಹಜ್‌ ಯಾತ್ರಿರ ಸಬ್ಸೀಡಿ ರದ್ದು ಮಾಡುವುದಾಗಿ ಹೇಳಿದ್ದಾರೆ.

ಸ್ವತಂತ್ರ್ಯಾ ನಂತರ ಮೊದಲ ಬಾರಿಗೆ 1.75 ಲಕ್ಷ ಹಜ್‌ ಯಾತ್ರಾರ್ಥಿಗಳು ಸಬ್ಸೀಡಿಯಿಲ್ಲದೆ ಯಾತ್ರೆಗೆ ತೆರಳುತ್ತಿದ್ದಾರೆ. ಸಬ್ಸೀಡಿ ರದ್ದು ಮಾಡುವ ಮೂಲಕ ಸರ್ಕಾರ 700 ಕೋಟಿ ರೂ ಉಳಿಸಲಿದೆ. ಸಬ್ಸೀಡಿಗೆ ಕಡಿತಗೊಳ್ಳುವ ನಿಧಿಯನ್ನು ಅಲ್ಪಸಂಖ್ಯಾತ ಸಮುದಾಯಗಳ ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ಕಲ್ಯಾಣಕ್ಕಾಗಿ ಬಳಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com