BSY ಅದು ಬಿಡ್ತೀನಿ, ಇದು ಬಿಡ್ತೀನಿ ಅಂದ್ರು, ಇದುವರೆಗೂ ಏನೂ ಬಿಟ್ಟಿಲ್ಲ : CM ಸಿದ್ದರಾಮಯ್ಯ

ಬೆಂಗಳೂರು : ಶೋಭಾ ಕರಂದ್ಲಾಜೆ ಸುಮ್ ಸುಮ್ನೆ ಸುಳ್ಳು ಹೇಳ್ಕೊಂಡು ಗಲಾಟೆ ಮಾಡ್ತಾಳೆ. ಚುನಾವಣೆ ಯುದ್ಧ ಇದ್ದ ಹಾಗೆ. ಬಿಜೆಪಿ ಅವರೆಲ್ಲ ಕೌರವರು ಇದ್ದ ಹಾಗೆ. ನಾವು ಕಾಂಗ್ರೆಸ್ ನವರು ಪಾಂಡವರ ಕಡೆಯವರ ಹಾಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ತಲೆ ತಗ್ಗಿಸುವ ಯಾವುದೇ ಕೆಲಸ ನಾವು ಮಾಡಿಲ್ಲ ಎಂದಿರುವ ಸಿಎಂ, ನಾವು ಸುಳ್ಳು ಹೇಳೋದು ಬೇಡ, ಸತ್ಯವನ್ನೇ ಬಲವಾಗಿ ಹೇಳೋಣ. ಇಷ್ಟು ಮಾಡಿದ್ರೆ ನಾವು ಬಿಜೆಪಿಯವರನ್ನ ಎದುರಿಸೋದು ಕಷ್ಟವೇನಲ್ಲ. ಪ್ರತೀ ಬೂತ್ ನಲ್ಲಿ 50 ವೊಟುಗಳು ಹೆಚ್ಚಾದ್ರೆ 10ಸಾವಿರ ಮತಗಳು ಹೆಚ್ಚಾಗುತ್ತೆ. ಬೂತ್ ಕಮಿಟಿ ಸದಸ್ಯರಿಗೆ ಕಡ್ಡಾಯವಾಗಿ ವರ್ಕ್ ಶಾಪ್ ಮಾಡಲೇಬೇಕು. ನಾವು ಇಷ್ಟೆಲ್ಲ ಮಾಡಿಬಿಟ್ರೆ ನಮ್ಮನ್ನು ಸೋಲಿಸೋರು ಯಾರೂ ಇಲ್ಲ ಎಂದಿದ್ದಾರೆ.

ಬಿಜೆಪಿಯ ಸಲುಗೆಯ ಶಾಸಕನೊಬ್ಬನನ್ನು ಮಾತನಾಡಿಸಿದೆ. ಏನಪ್ಪಾ ಮಿಷನ್ 150 ಅಂತೀರ ಅಂತ, ಸಾರ್ ನಾವು ಯಡಿಯೂರಪ್ಪ ಅವರನ್ನ ನಂಬಿಕೊಂಡಿಲ್ಲ. ಮೋದಿ ಅವರನ್ನ ನಂಬಿಕೊಂಡಿದ್ದೇವೆ ಎಂದ್ರು. ಯಡಿಯೂರಪ್ಪ ಅದು ಬಿಡ್ತೀನಿ ಇದು ಬಿಡ್ತೀನಿ ಎಂದ್ರು. ಬಿಎಸ್ ವೈ ಅವರದ್ದು ಖಾಲಿ ಬುಟ್ಟಿ. ಬಿಜೆಪಿ ಹಿಂದುತ್ವ ಅಂತ ಬರ್ತಾರೆ. ನಾವು ಅಗ್ರೆಸ್ಸಿವ್ ಆಗಿ ಹೇಳಬೇಕು. ಕಟುವಾಗಿ ಕೌಂಟರ್ ಮಾಡಬೇಕು. ಅವರೊಬ್ಬರೇ ಹಿಂದು ರಕ್ಷಕರಾ. ಅವರು ಅಧಿಕಾರಕ್ಕೆ ಬಂದಿದ್ದು ಈಗ. 70ವರ್ಷ ಹಿಂದು ಧರ್ಮದ ರಕ್ಷಣೆ ಮಾಡಿದ್ದು ಯಾರು. ಬಿಜೆಪಿಗೆ ಹಿಂದುತ್ವ ಬಿಟ್ಟು ಬೇರೇನೂ ಉಳಿದಿಲ್ಲ ಎಂದಿದ್ದಾರೆ.

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com