BJP ಎಂಬ ನಾಟಕದ ಕಂಪನಿಗೆ ಮೋದಿ ಮಾಲೀಕ, ಶಾ ಮ್ಯಾನೇಜರ್‌ : ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ : ಕರ್ನಾಟಕದವರನ್ನು ಗೋವಾದವರು ಬೈಯುವುದಕ್ಕೆ ರಾಜ್ಯ ಬಿಜೆಪಿಯೆ ಕಾರಣ. ಗೋವಾ ಮಂತ್ರಿ ವಿನೋದ್ ಪಾಳ್ಯಾಕರ್ ಗಿಂತ ಕೆಟ್ಟ ಬಾಷೆ ನಮಗೆ ಗೊತ್ತು.
ರಾಜ್ಯ ಬಿಜೆಪಿ ನಾಯಕರ ಯೋಗ್ಯತೆ ಜನತೆಗೆ ಗೊತ್ತಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರದ್ದು ಉತ್ತರನ ಪೌರುಷ ಒಲೆ ಮುಂದೆ ಎನ್ನುವಂತಾಗಿದೆ. ಬಿ.ಎಸ್.ಯಡಿಯೂರಪ್ಪ ಉತ್ತರ ಕುಮಾರನಂತಾಗಿದ್ದಾರೆ. ಮಹದಾಯಿ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಯರಿಸಿಕೊಳ್ಳುವಂತೆ ಮಹದಾಯಿ ನ್ಯಾಯಾಧಿಕರಣ ಒಂದು ಅವಕಾಶ ಕೊಟ್ಟಿತ್ತು. ಮಾತುಕತೆ ಬೇಡವಾದ್ರೆ ನ್ಯಾಯಾಧಿಕರಣದಲ್ಲೆ ನಾವು ನ್ಯಾಯ ಪಡೆಯುತ್ತವೆ ಎಂದಿದ್ದಾರೆ.

ಕೇಂದ್ರ ಬಿಜೆಪಿ ನಾಯಕರ ವಿರುದ್ದ ಸಹ ವಾಗ್ದಾಳಿ ನಡೆಸಿರುವ ರಾಮಲಿಂಗಾರೆಡ್ಡಿ, ಬಿಜೆಪಿ ಎಂಬ ನಾಟಕ ಕಂಪನಿಗೆ ಮೋದಿ ಮಾಲೀಕ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಮ್ಯಾನೇಜರ್. ಕರ್ನಾಟಕ ಗೋವಾ ಬಿಜೆಪಿ ನಾಯಕರು ಪಾತ್ರಧಾರಿಗಳು. ಕೆಲವರು ಜೋಕರ್ ಗಳು ಇನ್ನೂ ಕೆಲವರು ಹಿರೋಯಿನ್ ಗಳು ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.