ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟೆಸ್ಟ್‌ : ಕ್ಯಾಪ್ಟನ್‌ ಕೊಹ್ಲಿಗೆ ದಂಡ ವಿಧಿಸಿದ್ಯಾಕೆ ICC ?

ಸೆಂಚುರಿಯನ್‌ : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಟೀ ಇಂಡಿಯಾದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಸೋಮವಾರ ನಡೆದ ಮೂರನೇ ದಿನದಾಟದ ವೇಳೆ ಕೊಹ್ಲಿ ಅಂಪೈರ್‌ ವಿರುದ್ದ ತೋರಿದ ಅಸಮಾಧಾನದ ವರ್ತನೆಗೆ ಪಂದ್ಯ ಶುಲ್ಕದ ಶೇ.25ರಷ್ಟನ್ನು ದಂಡವಾಗಿ ಹೇರಲಾಗಿದೆ.
ಕೊಹ್ಲಿ ಐಸಿಸಿ ನೀತಿ ಸಂಹಿತೆಯ ನಿಯಮ ಉಲ್ಲಂಧನೆ ಮಾಡಿರುವ ಹಿನ್ನೆಲೆಯಲ್ಲಿ ದಂಡ ಹಾಗೂ ಒಂದು ಡೀಮೆರಿಟ್‌ ಅಂಕ ವಿಧಿಸಿರುವುದಾಗಿ ಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.ಎರಡನೇ ಇನ್ನಿಂಗ್ಸ್‌ನ 25ನೇ ಓವರ್‌ನ ಆಟ ನಡೆಯುವ ವೇಳೆ ಘಟನೆ ನಡೆದಿದೆ. ಮಳೆಯಿಂದಾಗಿ ಆಟದ ಮೈದಾನ ಒದ್ದೆಯಾಗಿದ್ದು, ಚೆಂಡು ಬದಲಿಸುವಂತೆ ಪದೇ ಪದೇ ಅಂಪೈರ್‌ಗೆ ದೂರುತ್ತಿದ್ದರು. ಅಲ್ಲದೆ ನೆಲ ಒದ್ದೆಯಾಗಿರುವುದರಿಂದ ಬೌಲರ್‌ಗಳಿಗೆ ಕಷ್ಟವಾಗುತ್ತಿದೆ ಎಂದಿದ್ದರು. ಬಳಿಕ ಬಾಲನ್ನು ಪಿಚ್‌ಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಪೈರ್‌ ಜೊತೆ ವಾದ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಕ್ಕೆ ಕೊಹ್ಲಿಗೆ ದಂಡ ವಿಧಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com