ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ : ಬೆಲೆ ಕೇಳಿದ್ರೆ ದಂಗಾಗ್ತೀರ..!

ಬೆಂಗಳೂರು : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸದ್ಯ ಸ್ಯಾಂಡಲ್‌ವುಡ್‌ನ ದುಬಾರಿ ನಟ. ಸಿನಿಮಾಗಳಿಗೆ ಹೆಚ್ಚಿನ ಸಂಭಾವನೆಯನ್ನೂ ಪಡೆಯುತ್ತಾರೆ.

ಹೌದು ಹಾಗಂತ ಅವರು ಪ್ರೂವ್‌ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದಂದು ನಟ ದರ್ಶನ್‌ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದು, ತಮ್ಮ ಹೊಸ ಕಾರಿನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್‌ಗೆ ಅವರ ಗೆಳೆಯರು ಸಾಥ್‌ ನೀಡಿದ್ದಾರೆ.

ಮೊದಲೇ ಕಾರುಗಳನ್ನು ಪ್ರೀತಿಸುವ ದರ್ಶನ್‌, ಈಗಾಗಲೆ ಜಾಗ್ವಾರ್‌, ಆಡಿ ಕ್ಯೂ, ಬಿಎಂಡಬ್ಲ್ಯೂ ಸೇರಿದಂತೆ ಅನೇಕ ಕಾರುಗಳನ್ನು ಖರೀದಿಸಿದ್ದಾರೆ. ಈಗ ಲ್ಯಾಂಬೋರ್ಗಿನಿ ಕಾರನ್ನೂ ಖರೀದಿಸಿದ್ದು, ಇದರ ಬೆಲೆ ಬರೋಬ್ಬರಿ 5 ಕೋಟಿಯಂತೆ.

ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ ನಟ ದರ್ಶನ್‌ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇದೇ ಜನವರಿ 11ರಂದು ಭಾರತದಲ್ಲಿ ಕಾರು ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಮೂರೇ ದಿನಕ್ಕೆ ದರ್ಶನ್‌ ಅವರಿಗೆ ಕಾರನ್ನು ಹಸ್ತಾಂತರಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com