ಮೋದಿ ಸರ್ಕಾರ ನನ್ನನ್ನು Encounter ಮಾಡಲು ಯತ್ನಿಸಿದೆ : ಪ್ರವೀಣ್ ತೊಗಾಡಿಯಾ ಆರೋಪ

ಅಹಮದಾಬಾದ್‌ : ಸೋಮವಾರ ನಾಪತ್ತೆಯಾಗಿ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಎಚ್‌ಪಿ ಮುಖಂಡ ಪ್ರವೀಣ್ ತೊಗಡಿಯಾ ಸುದ್ದಿಗೋಷ್ಠಿ ನಡೆಸಿದ್ದು, ಮೋದಿ ವಿರುದ್ದ ಸಿಡಿದೆಡ್ಡಿದ್ದಾರೆ.

ಜೀವ ಹೋದರೂ ನಾನು ಗುಜರಾತ್‌ರೈತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದಿರುವ ಅವರು, ನನ್ನನ್ನು ಎನ್‌ಕೌಂಟರ್‌ ಮಾಡಲು ರಾಜಸ್ಥಾನ ಹಾಗೂ ಗುಜರಾತ್‌ ಸರ್ಕಾರ ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದ್ದಾರೆ.

ಎರಡೂ ಸರ್ಕಾರಗಳು ಸೇರಿ ನನ್ನ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿವೆ. ನನ್ನನ್ನು ಮುಗಸಲು ಪ್ರಯತ್ನ ನಡೆಯುತ್ತಿದೆ ಎಂದು ನನಗೆ ತಿಳಿದ ಬಳಿಕ ನಾನು ನನ್ನ ಕಚೇರಿ ಬಿಟ್ಟು ಹೊರಬಂದೆ. ಹಳೇ ಪ್ರಕರಣವೊಂದರಲ್ಲಿ ನನ್ನನ್ನು ಟಾರ್ಗೆಟ್‌ ಮಾಡಲಾಗಿದ್ದು, ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನನ್ನು ಕೊಲ್ಲುವ ಪಿತೂರಿ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಬಂದ  ಕಾರಣ ನಾನು ನಾಪತ್ತೆಯಾಗಿದ್ದೆ ಎಂದಿದ್ದಾರೆ.

ರಾಮ ಮಂದಿರ ವಿಚರ, ಗೋಹತ್ಯೆ ನಿಷೇಧ, ರೈತರಿಗಾಗಿ ನನ್ನ ಹೋರಾಟದ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಧ್ವನಿಯನ್ನು ಅಡಗಿಸುವ ಯತ್ನ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನನ್ನ ಮೇಲೆ ದಾಳಿ ನಡೆಸಿದ್ದು ಯಾರು ಎಂಬ ಬಗ್ಗೆ ಸದ್ಯದಲ್ಲೇ ಸಾಕ್ಷಿ ಸಮೇತ ಸಾಬೀತು ಪಡಿಸುವುದಾಗಿ ಹೇಳಿದ್ದಾರೆ.

ಸದ್ಯ ತೊಗಾಡಿಯಾ ಆರೋಗ್ಯ ಸುಧಾರಿಸಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ನನ್ನ ಆರೋಗ್ಯ ಸಂಪೂರ್ಣವಾಗಿ ಸುಧಾರಿಸುವವರೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವುದಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com