ವೃದ್ಧನನ್ನು ಪ್ರಾಣಿಯಂತೆ ಹೊರಗೆಸೆದ ಪೇದೆಯನ್ನು ಅಮಾನತು ಮಾಡಿದ SP ಅಣ್ಣಾಮಲೈ

ಶೃಂಗೇರಿ: ಶಾರದಾ ದೇವಿ ದೇವಾಲಯದ ಮಹಾದ್ವಾರದಲ್ಲಿದ್ದ ವೃದ್ದರೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ಪ್ರಾಣಿಯಂತೆ ಕೊರಳಪಟ್ಟಿ ಹಿಡಿದು ಎಳೆದಾಡಿ ಹೊರಗೆ ಎಸೆದೆ ಘಟನೆ ನಡೆದಿದೆ.

ಸಂಕ್ರಾಂತಿ ಹಿನ್ನೆಲೆಯಲ್ಲಿ ಶಾರದಾ ದೇವಸ್ಥಾನ ಜನರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವೃದ್ದರೊಬ್ಬರು ಬಾಗಿಲ ಬಳಿ ನಿಧಾನವಾಗಿ ಬರುತ್ತಿದ್ದರು. ಈ ವೇಳೆ ಪೊಲೀಸ್‌ ಪೇದೆಯೊಬ್ಬರು ಇದ್ದಕ್ಕಿದ್ದಂತೆ ವೃದ್ಧನ ಕೊರಳಪಟ್ಟಿ ಹಿಡಿದು ದರದರನೆ ಎಳೆದುಕೊಂಡು ಹೋಗಿ ಹೊರಗೆ ಎಸೆದಿದ್ದಾರೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ಬಳಿಕ ಕೂಡಲೆ ಎಚ್ಚೆತ್ತ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಪೊಲೀಸ್‌ ಪೇದೆ ಸುರೇಶ್‌ ಭಟ್‌ ಎಂಬಾತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com