ಕಲಬುರಗಿಯಲ್ಲಿ ಮತ್ತೆ ಕಾರ್‌ಗೆ ಬೆಂಕಿ ಇಟ್ಟ ಕಿಡಿಗೇಡಿಗಳು : CCTV ಯಲ್ಲಿ ಕೃತ್ಯ ಸೆರೆ

ಕಲಬುರಗಿ : ನಗರದಲ್ಲಿ ಹಾಡ ಹಗಲೇ ದುಷ್ಕರ್ಮಿಯೊಬ್ಬ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಕಳೆದ ಎರಡು ದಿನಗಳಲ್ಲಿ ರಾತ್ರಿ ವೇಳೆ ಹತ್ತಕ್ಕೂ ಹೆಚ್ಚು ಕಾರ್ ಗಳಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು ಇಂದೂ ತಮ್ಮ ದುಷ್ಕೃತ್ಯ ಮುಂದುವರೆಸಿದ್ದಾರೆ. ನಸುಕಿನ ವೇಳೆಯಲ್ಲಿ ಆನಂದ ನಗರ ಬಡಾವಣೆಯಲ್ಲಿ ಆನಂದ ದೊಡ್ಡಮನಿ ಎಂಬುವರಿಗೆ ಸೇರಿದ ಐ 20 ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಮಧ್ಯಾಹ್ನ ದುಷ್ಕರ್ಮಿಯಿಂದ ಕೃತ್ಯ ಮುಂದುವರೆದಿದ್ದು, ಖೂಬಾ ಪ್ಲಾಟ್ ನಲ್ಲಿ‌ ಮನೆ ಮುಂದೆ ನಿಲ್ಲಿಸಿದ್ದ ಹೋಂಡಾ ಡಬ್ಲು ಆರ್ ವಿ ಕಾರ್ ಮುಂಭಾಗ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಅಕ್ಕಪಕ್ಕದ ಮನೆಯವರು ಹೇಳಿದ ಬಳಿದ ಎಚ್ಚೆತ್ತ ಕಾರ್ ಮಾಲಿಕ ನೀರನ್ನು ಹಾಕಿ ಬೆಂಕಿ ನಂದಿಸಿದ್ದಾರೆ.
ಆಕಾಶ ಚಿಮ್ಮಲಗಿ ಎಂಬುವರಿಗೆ ಸೇರಿದ ಕಾರ್ ಇದಾಗಿದ್ದು, ಕೇವಲ ಹದಿನೈದು ದಿನಗಳ ಹಿಂದಷ್ಟೇ ಈ ಕಾರನ್ನು ಕೊಂಡುಕೊಂಡಿದ್ದರು. ರಾತ್ರಿ ವೇಳೆ ಸೀಮಿತವಾಗಿದ್ದ ಕಿಡಿಗೇಡಿಗಳ ಉಪಟಳ ಹಗಲಿನಲ್ಲಿಯೂ ಮುಂದುವರೆದಿರುವುದು ಜನರನ್ನು ತಲ್ಲಣಗೊಳ್ಳುವಂತೆ ಮಾಡಿದೆ.

Leave a Reply

Your email address will not be published.