BIGG BOSS : ಟ್ರೋಫಿಯನ್ನು ಮುಡಿಗೇರಿಸಿಕೊಂಡ ಶಿಲ್ಪಾ ಶಿಂಧೆ

ಹಿಂದಿಯ ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್‌ಬಾಸ್‌ನ 11ನೇ ಆವೃತ್ತಿಯಲ್ಲಿ  ಕಿರುತೆರೆ ನಟಿ ಶಿಲ್ಪಾ ಶಿಂಧೆ ವಿನ್‌ ಆಗಿದ್ದಾರೆ. ನಟಿ ಹೀನ ಖಾನ್‌ ಗಿಂತ ಶಿಲ್ಪಾ ಶಿಂಧೆ ಅಧಿಕ ಮತ ಗಳಿಸಿ ಜಯ ಸಾಧಿಸಿದ್ದು. ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಅನೇಕ ದಿನಗಳಿಂದ ಶಿಲ್ಪಾ ಗೆಲ್ಲುತ್ತಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಟಾಪ್ 4 ಸ್ಥಾನದಲ್ಲಿದ್ದ ಪುನೀಶ್‌ ಶರ್ಮಾ ಹಾಗೂ ವಿಕಾಸ್‌ ಗುಪ್ತಾ ಅವರಿಗೆ ಕಡಿಮೆ ಮತ ಸಿಕ್ಕ ಪರಿಣಾಮ ಮೊದಲೇ ಹೊರ ಬಿದ್ದಿದ್ದರು.

ಅಂತಿಮವಾಗಿ ಶಿಲ್ಪಾ ಹಾಗೂ ಹೀನಾ ಮಧ್ಯೆ ಪೈಪೋಟಿ ಇತ್ತು. ಸಲ್ಮಾನ್‌ ಖಾನ್‌ ನಿರೂಪಣೆ ಈ ಶೋನ ಗ್ರ್ಯಾಂಡ್ ಫಿನಾಲೆಗೆ ನಟ ಅಕ್ಷಯ್‌ ಕುಮಾರ್‌ ಅವರನ್ನು ಅತಿಥಿಯನ್ನಾಗಿ ಕರೆಯಾಗಿತ್ತು. ಅಕ್ಟೋಬರ್‌ 1ರಿಂದ ಪ್ರಾರಂಭವಾಗಿದ್ದ ಶೋ ಭಾನುವಾರ ಮುಗಿದಿದ್ದು, ಶಿಲ್ಪಾ ಬಿಗ್‌ಬಾಸ್‌ 11ರ ವಿನ್ನರ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com