ಕಸದ ವಾಹನದಲ್ಲಿ ಪತ್ರಕರ್ತನ ಶವ ರವಾನೆ : ಕುಟುಂಬಕ್ಕೆ ಪ್ರಕಾಶ್‌ ರೈರಿಂದ 1 ಲಕ್ಷ ಘೋಷಣೆ

ಹಾವೇರಿ : ಖಾಸಗಿ ವಾಹಿನಿಯ ವರದಿಗಾರ ಮೌನೇಶ್ ಪೊತರಾಜ್ ಅವರ ಮೃತದೇಹವನ್ನು ಕಸದ ಲಾರಿಯಲ್ಲಿ ಸಾಗಿಸಿ ಅವಮಾನವೆಸಗಿದ ಪ್ರಕರಣ ಸಂಬಂಧ ಹಾವೇರಿ ಎಸ್‌.ಪಿ ಪರಶುರಾಂ ಪ್ರತಿಕ್ರಿಯಿಸಿದ್ದಾರೆ.

ಹಾನಗಲ್‌ ಪಿಎಸ್‌ಐ ಗುರುರಾಜ್‌ ಮೈಲಾರ ಹಾಗೂ ಘಟನೆಯನ್ನು ಸೂಕ್ತ ಮೇಲ್ವಿಚಾರಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಸಿಪಿಐ ರೇವಪ್ಪ ಎಚ್‌.ಕಟ್ಟಿಮನಿ ಅವರಿಗೆ ಕೆೆಸ್‌ಡಿಪಿ 7ರ ಅಡಿಯಲ್ಲಿ ದೋಷಾರೋಪ ಪತ್ರವನ್ನು ಜಾರಿ ಮಾಡಲಾಗಿದೆ. ಜೊತೆಗೆ ಹಾನಗಲ್‌ ಪಿಎಸ್‌ಐ ಗುರುರಾಜ್‌ ಮೈಲಾರ ಅವರನ್ನು ವರ್ಗಾವಣೆ ಮಾಡಲಾಗಿದೆ. ಘಟನೆಗೆ ಪೊಲೀಸ್‌ ಇಲಾಖೆ ವಿಶಾದ ವ್ಯಕ್ತಪಡಿಸಿರುವುದಾಗಿ ಪರಶುರಾಂ ಹೇಳಿದ್ದಾರೆ.

ಮತ್ತೊಂದೆಡೆ ಮೌನೇಶ್‌ ಅವರ ಸಾವಿಗೆ ಮಿಡಿದಿರುವ ನಟ ಪ್ರಕಾಶ್ ರೈ ಮೃತ ಪತ್ರಕರ್ತನ ಕುಟುಂಬಕ್ಕೆ 1 ಲಕ್ಷ ರೂ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಸಹ ಮೃತ ಪತ್ರಕರ್ತನ ದೇಹವನ್ನು ಕಸದ ಲಾರಿಯಲ್ಲಿ ಸಾಗಿಸಿದ್ದರ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ, ಘಟನೆಯಿಂದ ನೋವಾಗಿದೆ. ಪ್ರಕರಣ ಸಂಬಂದ ವರದಿ ಕೇಳಿರುವುದಾಗಿ ಹೇಳಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com