ಹಿಂದುತ್ವದ ಫಿಲಾಸಫಿಯೇ ಸಹನೆ, ಆದರೆ ನಿಮಗೆ ಅದೇ ಇಲ್ವಲ್ಲ, ನೀವೆಂಥ ಹಿಂದೂ : HDD

ಬೆಂಗಳೂರು : ಹಿಂದುತ್ವದ ಫಿಲಾಸಫಿಯೇ ಸಹನೆ. ನೀವು ಇನ್ನೊಂದು ಧರ್ಮವನ್ನು ಸಹಿಸದೇ ಇದ್ದರೆ ನಿಮ್ಮದೆಂತ ಹಿಂದುತ್ವ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ. ನಾನು ಶೃಂಗೇರಿಯಲ್ಲಿ ಶತರುದ್ರಯಾಗ ಮಾಡಿಸಿದ್ದು ಶತ್ರುನಾಶಕ್ಕಲ್ಲ. ಅದಕ್ಕೆ ಶತ ಚಂಡಿಯಾಗ ಮಾಡುತ್ತಾರೆ. ಕೊಲ್ಲೂರಲ್ಲಿ ಯಾರೋ ಚಂಡಿಯಾಗ ಮಾಡಿಸಿದ್ರಲ್ಲ ಅದು ಶತ್ರುನಾಶಕ್ಕೆ ಮಾಡಿದ್ದು. ನಾವು ಮಾಡಿಸಿದ ಶತರುದ್ರಯಾಗ ಅದು ಲೋಕ ಕಲ್ಯಾಣಕ್ಕೆ ಎಂದಿದ್ದಾರೆ.

ಆದಿ ಶಂಕರರು ಹಿಂದೂ ಧರ್ಮದ ಉದ್ದಾರಕರಲ್ಲ ಎಂದಿರುವ ಎಚ್ಡಿಡಿ, ಅವರ ಪೀಠದ ಗುರುಗಳಿಗೆ ಹೈದ್ರಾಬಾದ್ ನಿಜಾಮ ಚಿನ್ನದ ಕಿರೀಟ ಕೊಟ್ಟಿದ್ದಾರೆ. ಶೃಂಗೇರಿ ಗುರುಗಳು ಆಚರಿಸುತ್ತಾರಲ್ಲ ಅದು ನಿಜವಾದ ಹಿಂದುತ್ವ. ಕರಾವಳಿಯಲ್ಲಿ ಹೆಚ್ಚು ಹತ್ಯೆಗಳಾದವಲ್ಲ ಅದಾ ಹಿಂದುತ್ವ ಎಂದು ಪ್ರಶ್ನಿಸಿದ್ದಾರೆ. ನಮಗೆ ಎಲ್ಲ ದೇವರಲ್ಲಿ ನಂಬಿಕೆಯಿದೆ. ಅನ್ಯಧರ್ಮದ ಬಗ್ಗೆ ವಿಶ್ವಾಸವೂ ಇದೆ. ಜೆಡಿಎಸ್‌ ಸತ್ತೇ ಹೋಯ್ತು ಎಂದುಕೊಂಡಿದ್ದ ಸಿದ್ದರಾಮಯ್ಯನವರಿಗೆ ಈ ಪಕ್ಷ ಏನು ಅಂತಾ ನಿಧಾನವಾಗಿ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಅನಿವಾರ್ಯವಾಗಿದ್ದರೂ ನಮಗೇನಲ್ಲ. ಮಾರ್ಚ್ ವೇಳೆಗೆ ಇನ್ನೂ ಏನೇನು ಬೆಳವಣಿಗೆಯಾಗುತ್ತದೆ ಕಾದು ನೋಡಿ. ನಾವು ದೇವರನ್ನೂ ನಂಬುತ್ತೇವೆ, ಸ್ವಯಂ ಶಕ್ತಿ ಯನ್ನೂ ಬಳಸುತ್ತೇವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com