ಈಗಲೂ ಕಾಂಗ್ರೆಸ್‌ನವರು ಭಿಕ್ಷೆ ಕೇಳಿದ್ರೆ ಎಡಗೈನಲ್ಲಿ ನೀಡುತ್ತೇನೆ : ಜನಾರ್ಧನ ರೆಡ್ಡಿ

ಬೆಂಗಳೂರು : ಕಾಂಗ್ರೆಸ್‌ನವರು, ಸಿಎಂ ಸಿದ್ದರಾಮಯ್ಯ ಈಗಲೂ ನನ್ನ ಬಳಿ ಭಿಕ್ಷೆ ಕೇಳಿದರೆ ಹಿಂದೂ ಮುಂದು ಯೋಚಿಸದೆ ನನ್ನ ಎಡಗೈನಲ್ಲಿ ಭಿಕ್ಷೆ ನೀಡುವುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ದೊಮ್ಮಸಂದ್ರದಲ್ಲಿ ನಡೆದ ಸಂಕ್ರಾಂತಿ ಸಂಭ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ದುಷ್ಟ ವ್ಯಕ್ತಿ ಎಂದು ಏಕವಚನದಲ್ಲೇ ಸಂಬೋಧಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ನನ್ನ ಬಳಿ ಅಕ್ರಮ ಸಂಪತ್ತು ಇದೆ ಎಂದು ಆರೋಪಿಸಿತ್ತು. ಆದರೆ ಒಂದು ರೂಪಾಯಿಯನ್ನೂ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ನವರು ನನ್ನ ಬಳಿ ಬಂದು ಭಿಕ್ಷೆ ಕೇಳಿದರೆ ಮುಲಾಜಿಲ್ಲದೆ ನನ್ನ ಎಡಗೈನಲ್ಲಿ ಕೊಡುತ್ತೇನೆ ಎಂದಿದ್ದಾರೆ.

ನನ್ನ ವಿರುದ್ದ ಸುಳ್ಳು ಆರೋಪ ಮಾಿ ಜೈಲಿಗೆ ಕಳಿಸಿದ್ದರು. ಕೇಂದ್ರದಲ್ಲಿ ಆಗ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೂ ನನ್ನನ್ನು ಏನೂ ಮಾಡಲು ಆಗಲಿಲ್ಲ. ಮುಂದ ಜನತೆಯ ಆಶಿರ್ವಾದದಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಯಾವ ದುಸ್ಥಿತಿಗೆ ತರುತ್ತೇನೆ ನೋಡಿ ಎಂದಿದ್ದಾರೆ.

ಬಿಜೆಪಿಯಿಂದ ನನಗೆ ಅವಕಾಶ ನೀಡಿದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ನಾನು ಇನ್ನು  ಸಾಯುವವರೆಗೂ ರೈತನ ಪೋಷಾಕು ಪಂಚೆ ಧರಿಸುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com