ರಾಜ್ಯದಲ್ಲಿ ಮತ್ತೊಂದು ಪಕ್ಷದ ಉದಯ : ಲೋಕಾರ್ಪಣೆಗೊಂಡ “ಜನಸಾಮಾನ್ಯರ ಪಕ್ಷ”

ಬಾಗಲಕೋಟೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೊಸ ಹೊಸ ಪಕ್ಷಗಳು ಜನ್ಮತಾಳುತ್ತಿವೆ. ಸೋಮವಾರ ಕೂಡಲಸಂಗಮದಲ್ಲಿ ಜನಸಾಮಾನ್ಯರ ಪಕ್ಷ ಎಂಬ ಹೆಸರಿನಲ್ಲಿ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ.

ಜನಸಾಮಾನ್ಯರಿಂದ ಜನಸಾಮಾನ್ಯರಿಗಾಗಿ ಎಂಬುದು ಪಕ್ಷದ ಘೋಷವಾಕ್ಯವಾಗಿದ್ದು, ರೈತರು , ಚಿಂತಕರು, ಶಿಕ್ಷಣ ತಜ್ಞರು ಹಾಗೂ ಜನಸಾಮಾನ್ಯರು ಸೇರಿ ಪಕ್ಷ ಸ್ಥಾಪನೆ ಮಾಡಿದ್ದಾರೆ. ಈ ಪಕ್ಷಕ್ಕೆ ಸಾಹಿತಿ ಚಂದ್ರಶೇಖರ ಕಂಬಾರ ಅವರು ಬೆಂಬಲ ವ್ಯಕ್ತಪಡಿಸಿದ್ದು, ಪಕ್ಷದ ಲಾಂಛನವನ್ನು ಉದ್ಘಾಟಿಸಿದ್ದಾರೆ.

ಅನೇಕ ವರ್ಷಗಳಿಂದ ಮಹದಾಯಿ ವಿಚಾರ ಸಮಸ್ಯೆಯಾಗಿಯೇ ಉಳಿದಿದೆ. ಈ ಯೋಜನೆಯ ಇತ್ಯರ್ಥಕ್ಕೆ ಹಾಗೂ ಪ್ರಾದೇಶಿಕ ಅಸಮಾನತೆಗೆ ಧಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞ ಡಾ. ಅಯ್ಯಪ್ಪ ಅವರ ನೇತೃತ್ವದಲ್ಲಿ ಪಕ್ಷ ಸ್ಥಾಪನೆಯಾಗಿದೆ.

ಜನಸಾಮಾನ್ಯರೂ ಈ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಈ ಪಕ್ಷಕ್ಕೆ ಟ್ರ್ಯಾಕ್ಟರ್‌ ಓಡಿಸುತ್ತಿರುವ ರೈತನ ಚಿಹ್ನೆಯನ್ನು ಇಡಲಾಗಿದೆ.

Leave a Reply

Your email address will not be published.