ರಾಮನಾಗಿ ರಾಹುಲ್‌ , ರಾವಣನಾಗಿ ಮೋದಿ : ಅಮೇಥಿಯಲ್ಲಿ ಶುರುವಾಗಿದೆ ಪೋಸ್ಟರ್‌ War

ಅಮೇಥಿ : ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ತಮ್ಮ ಕ್ಷೇತ್ರವಾದ ಅಮೇಥಿಗೆ ಭೇಟಿ ನೀಡಿತ್ತಿದ್ದಂತೆಯೇ ಅಮೇಥಿಯಲ್ಲಿ 2019ರ ಚುನಾವಣೆ ಕಾವು ಪಡೆಯುತ್ತಿದೆ. ಅ ಪೋಸ್ಟರ್‌ ವಾರ್‌ ಸಹ ಆರಂಭವಾಗಿದೆ.

ರಾಹುಲ್‌ ಗಾಂಧಿ ಅಮೇಥಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪೋಸ್ಟರ್‌ಗಳು ಕಂಡು ಬಂದದ್ದು, ರಾಹುಲ್‌ ಗಾಂಧಿಯನ್ನು ಶ್ರೀರಾಮನಾಗಿಯೂ ಪ್ರಧಾನಿ ಮೋದಿಯನ್ನು ರಾವಣನನ್ನಾಗಿಯೂ ಬಿಂಬಿಸಲಾಗಿದೆ.

ರಾಹುಲ್‌ ರೂಪ್‌ ಮೆ ಭಗವಾನ್‌  ರಾಮ್‌ ಕಾ ಅವತಾರ್‌ ಹೈ, 2019 ಮೆ ಆಯೇಗಾ ರಾಹುಲ್‌ ರಾಜ್ ಎಂಬ ವಾಕ್ಯಗಳು ಗೋಚರವಾಗಿದೆ.ಮತ್ತೊಂದು ಪೋಸ್ಟರ್‌ನಲ್ಲಿ ರಾಹುಲ್‌ ಅವರನ್ನು ಶ್ರೀಕೃಷ್ಣನಾಗಿ ಚಿತ್ರಿಸಲಾಗಿದೆ. ಸಂಘರ್ಷ್‌ ಸೇ ವಿಜಯ್‌ ಕೀ ಔರ್‌ ಚಲೇೇ ದಿಯೇ ಮಹಾರಥಿ ಎಂಬ ವಾಕ್ಯವನ್ನು ಪೋಸ್ಟರ್‌ನಲ್ಲಿ ಹಾಕಲಾಗಿದೆ.

ಇಂದು ರಾಹುಲ್‌ ಅಮೇಥಿಗೆ ಆಗಮಿಸಲಿದ್ದು, 7 ಕಡೆಗಳಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com