ಜೇಬಲ್ಲಿ 99 ರೂ ಇದ್ರೆ ಸಾಕು 7 ರಾಜ್ಯಗಳನ್ನು ಸುತ್ತಬಹುದು…ಅದೂ ವಿಮಾನದಲ್ಲಿ….!!

ತಾವು ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎಂಬ ಆಸೆಯಿರುತ್ತದೆ. ಆದರೆ ವಿಮಾನಯಾನ ಮಧ್ಯಮ ವರ್ಗದ, ಬಡ ಜನರಿಗೆ ಮರೀಚಿಕೆಯೇ ಸರಿ. ಆದರೆ ಇತ್ತೀಚಿನ ದಿನಗಳಲ್ಲಿ ವಿಮಾನ ಸಂಸ್ಥೆಗಳು ದರ ಸಮರಕ್ಕೆ ಬಿದ್ದು ಕಡಿಮೆ ಬೆಲೆಯಲ್ಲಿ ವಿಮಾನಯಾನಕ್ಕೆ ಅವಕಾಶ ಮಾಡಿಕೊಡುತ್ತಿದೆ.

ಈಗ ಏರ್ ಏಷ್ಯಾ ವಿಮಾನ ಸಂಸ್ಥೆ ಹೊಸ ವರ್ಷ ಹಾಗೂ ಸಂಕ್ರಾಂತಿಯ ಪ್ರಯುಕ್ತ ಗ್ರಾಹಕರಿಗೆ ಕೇವಲ 99ರೂಗೆ ವಿಮಾನಯಾನ ಟಿಕೆಟ್‌ ಘೋಷಿಸಿದೆ. ಭಾರತದ ಏಳು ಪ್ರಮುಖ ನಗರಗಳಿಗೆ  ಪ್ರಯಾಣಿಸುವವರಿಗೆ ಕೇವಲ 99 ರೂ ಟಿಕೆಟ್‌ ನೀಡುತ್ತಿದೆ.

ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಸುವವರು ಇದರ ಲಾಭ ಪಡೆಯಬಹುದು. ಜನವರಿ 21ರವರೆಗೆ ಈ ಆಫರ್‌ ಇರಲಿದೆ. ಅಲ್ಲದೆ ಈ ಮೇಲ್ಕಂಡ ನಗರಗಳಿಗೆ ಜುಲೈ 31ರ ಒಳಗೆ ಪ್ರಯಾಣಿಸಬಹುದು. ಇದೇ ವೇಳೆ 1499 ರೂಗೆ 10 ರಾಷ್ಟ್ರಗಳಿಗೆ ಪ್ರಯಾಣ ಮಾಡುವ ಅವಕಾಶವನ್ನೂ ಕಲ್ಪಿಸಿದೆ. ಆಕ್ಲೆಂಡ್‌, ಬಾಲಿ, ಬ್ಯಾಂಕಾಕ್‌, ಕೌಲಾಲಂಪುರ್‌, ಮೆಲ್ಬರ್ನ್‌, ಸಿಂಗಾಪುರ್‌ ಮತ್ತು ಸಿಡ್ನಿಗೆ ಪ್ರಯಾಣಿಸಬಹುದು.

Leave a Reply

Your email address will not be published.

Social Media Auto Publish Powered By : XYZScripts.com