ಆಧಾರ್‌ ದೃಢೀಕರಣಕ್ಕೆ ಮುಖಚರ್ಯೆ ಬಳಕೆ : ಜುಲೈ 1ರಿಂದ ಹೊಸ ವಿಧಾನ ಸೇರ್ಪಡೆ

ದೆಹಲಿ : ಆಧಾರ್ ಕಾರ್ಡ್‌ ಗುರುತುಗಳ ಪಟ್ಟಿಗೆ ಹೊಸ ವಿಧಾನವೊಂದು ಸೇರ್ಪಡೆಯಾಗಿದ್ದು, ಮುಖವನ್ನೂ ಸಹ ಗುರುತಿಸ ಪಟ್ಟಿಗೆ ಸೇರಿಸಲು ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ.
ಆಧಾರ್‌ ಮಾಹಿತಿಗೆ ಹೊರಗಿನವರು ಕನ್ನ ಹಾಕುತ್ತಿದ್ದು, ಇದನ್ನು ತಡೆಗಟ್ಟಲು ಹೆಚ್ಚುವರಿಯಾಗಿ ಭದ್ರತೆ ಒದಗಿಸಲು ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಈಗಿರುವ ಕೈಬೆರಳಚ್ಚು ಹಾಗೂ ಕಣ್ಣಿನ ಬಿಂಬದೊಂದಿಗೆ ಮುಖದ ಬಿಂಬವನ್ನೂ ಗುರುತಾಗಿ ಸೇರಿಸಲು ಮುಂದಾಗಿದ್ದು, ಇದರಿಂದಾಗಿ ಬೆರಳಚ್ಚು ಮೂಲಕ ಆಧಾರ್‌ ಪಡೆಯಲು ಹೆಣಗಾಡುತ್ತಿರುವ ವಯೋವೃದ್ದರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 1ರಿಂದ ಈ ಗುರುತಿನ ಕ್ರಮ ಜಾರಿಗೆ ಬರಲಿದೆ.
ಇತ್ತಿಚೆಗಷ್ಟೇ ಆಧಾರ್‌ ಕಾರ್ಡ್ ಮಾಹಿತಿ ಸೋರಿಕೆಯಾಗಿವೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ ವರ್ಚುವಲ್‌ ರಿಯಾಲಿಟಿ ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿತ್ತು. ಇದಾದ ಬಳಿಕ ಮುಖದ ಗುರುತನ್ನು ಆಧಾರ್‌ಗೆ ಸೇರ್ಪಡೆ ಮಾಡಲು ಮುಂದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com