WATCH : ಯಾದಗಿರಿ ಜಾತ್ರೆಯಲ್ಲಿ ನಿಷೇಧದ ನಡುವೆಯೂ ಕುರಿ ಎಸೆದ ಭಕ್ತರು

ಯಾದಗಿರಿ :  ಜಿಲ್ಲೆಯ ಐತಿಹಾಸಿಕ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಆರಂಭವಾಯಿತು. 5 ದಿನಗಳವರೆಗೆ ನಡೆಯುವ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳು ಸೇರಿದಂತೆ ಆಂಧ್ರ, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದರು. ಪಲ್ಲಕ್ಕಿ ಉತ್ಸವದಲ್ಲಿ ಕುರಿ ಎಸೆತ ನಿಷೇಧದ ನಡುವೆಯೂ ಭಕ್ತರು ಕುರಿ ಮರಿಗಳನ್ನು ಎಸೆದು ತಮ್ಮ ಹರಕೆ ತೀರಿಸಿದರು.
ಜನ ಜಂಗುಳಿಯ ನಡುವೆ ಮೈಲಾರಲಿಂಗೇಶ್ವರ ಪಲ್ಲಕ್ಕಿಯನ್ನು ಪುಣ್ಯ ಸ್ನಾನಕ್ಕಾಗಿ ಇಲ್ಲಿನ ಹೊನ್ನಕೆರೆಗೆ ಮೆರವಣಿಗೆ ಮೂಲಕ ತರಲಾಯಿತು. ಆ ಸಂದರ್ಭದಲ್ಲಿ ಭಕ್ತರು ಜೋಳದ ತೆನೆ, ಭಂಡಾರ ಹಾಗೂ ಕುರಿಯ ಕೂದಲನ್ನು ಪಲ್ಲಕ್ಕಿಯ ಮೇಲೆ ಎಸೆದು ಭಕ್ತಿ ಮೆರೆದರು. ಪುರಾತನ ಆಚರಣೆಯಾದ ಕುರಿಯನ್ನು ಪಲ್ಲಕ್ಕಿಯ ಮೇಲೆ ಎಸೆಯುವ ಪದ್ದತಿಗೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಭಕ್ತರು ಪಲ್ಲಕ್ಕಿಯ ಮೇಲೆ 3ಕ್ಕು ಹೆಚ್ಚು ಕುರಿ ಮರಿಗಳನ್ನು ಎಸೆದು ತಮ್ಮ ಹರಕೆ ತೀರಿಸಿದರು. ಜಿಲ್ಲಾಡಳಿತ ನಿರ್ಮಿಸಿದ 6 ಚೆಕ್ ಪೋಸ್ಟ್ಳಲ್ಲಿ ಇದುವರೆಗೂ ಸುಮಾರು 1000 ಕ್ಕೂ ಹೆಚ್ಚು ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com