In Pics : ತಮಿಳುನಾಡಿನಲ್ಲಿ ಪೊಂಗಲ್‌ ಹಬ್ಬದ ಸಂಭ್ರಮ : ಶುರುವಾಯ್ತು ಜಲ್ಲಿಕಟ್ಟು ಕ್ರೀಡೆ

ಚೆನ್ನೈ :  ತಮಿಳುನಾಡಿನಲ್ಲಿ ಪೊಂಗಲ್‌ ಹಬ್ಬದ ಪ್ರಯುಕ್ತ ಜಲ್ಲಿಕಟ್ಟು ಕ್ರೀಡೆ ಆರಂಭಗೊಂಡಿದೆ.ಈ ಬಾರಿ ಜಲ್ಲಿಕಟ್ಟಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗೂಳಿಗಳನ್ನು ಕರೆತರುವ ನಿರೀಕ್ಷೆ ಇದೆ.
ಮಧುರೈನಲ್ಲಿ ಪ್ರತೀ ವರ್ಷ ಪೊಂಗಲ್‌ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ವೇಳೆ ಮೂರು ದಿನಗಳ ಕಾಲ ಈ ಕ್ರೀಡೆ ನಡೆಯಲಿದೆ.
ಕೆಲ ತಿಂಗಳ ಹಿಂದೆ ಜಲ್ಲಿಕಟ್ಟು ಕ್ರೀಡೆಯಿಂದಾಗಿ ಪ್ರಾಣಿಗಳಿಗೆ ಹಾನಿಯಾಗುತ್ತಿದ್ದು, ಗೂಳಿಗಳನ್ನು ಹಿಂಸಿಸಲಾಗುತ್ತಿದೆ. ಅಲ್ಲದೆ ಇದರಿಂದ ಆಟಗಾರರ ಜೀವಕ್ಕೂ ಅಪಾಯವಿದೆ ಎಂದು ಪ್ರಾಣಿ ದಯಾ ಸಂಘ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಆದರೆ ಸುಪ್ರೀಂಕೋರ್ಟ್‌ನಲ್ಲಿ ತಮಿಳರಿಗೆ ಜಯ ಸಿಕ್ಕಿದ್ದು, ಷರತ್ತು ಬದ್ದ ಆಟಕ್ಕೆ ಒಪ್ಪಿಗೆ ನೀಡಲಾಗಿತ್ತು. ಸುಪ್ರೀಂ ತೀರ್ಪಿನ ಬಳಿಕ ನಡೆಯುತ್ತಿರುವ ಮೊದಲ ಕ್ರೀಡೆ ಇದಾಗಿದೆ.
 

Leave a Reply

Your email address will not be published.

Social Media Auto Publish Powered By : XYZScripts.com