ಸರ್ಕಾರದ ಹಣದಿಂದಲ್ಲ, ತಮ್ಮ ಸ್ವಂತ ದುಡ್ಡಲ್ಲೇ ಬಟ್ಟೆ ಖರೀದಿಸ್ತಾರಂತೆ ಮೋದಿ !

ದೆಹಲಿ : ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅವರ ಬಟ್ಟೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಈಗ ಆ ಚರ್ಚೆಗೆ ಬ್ರೇಕ್‌ ಬಿದ್ದಿದ್ದು, ಮೋದಿ ತಮ್ಮ ಉಡುಪನ್ನು ತಮ್ಮ ಸ್ವಂತ ದುಡ್ಡಿನಿಂದಲೇ ಖರೀದಿ ಮಾಡುತ್ತಾರೆ ಎಂಬ ಅಂಶ ಆರ್‌ಟಿಐ ನಿಂದ ಹೊರಬಿದ್ದಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ರೋಹಿತ್‌ ಸಬರ್ವಾಲ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಲಾಖೆ ಉತ್ತರಿಸಿದ್ದು, ಮೋದಿ ತಮ್ಮದೇ ಖರ್ಚಿನಲ್ಲಿ ಉಡುಪುಗಳನ್ನು ಖರೀದಿಸುತ್ತಾರೆ. ಇದಕ್ಕಾಗಿ ಸರ್ಕಾರದ ನಯಾ ಪೈಸೆಯೂ ಖರ್ಚಾಗುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಅನೇಕ ಬಾರಿ ಮೋದಿ ಅವರ ಬಟ್ಟೆಗೆ ಸರ್ಕಾರದ ಹಣ ಬಳಕೆಯಾಗುತ್ತಿದೆ ಎಂಬ ಸುದ್ದಿಗಳು ಹರಡಿದ್ದವು. ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದ್ದರಿಂದ ಆಟಿಐನಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ಸಿಕ್ಕಿದೆ.

ಈ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ಬಂದಿದ್ದರು. ಈ ವೇಳೆ ಮೋದಿ ಅವರ ಬಟ್ಟೆಯ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದಕ್ಕೆ ಸರಿಯಾಗಿ ದೆಹಲಿ ಸಿಎಂ ಕೇಜ್ರಿವಾಲ್‌, ಮೋದಿ 10 ಲಕ್ಷದ ಬಟ್ಟೆ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಂತಾಗಿದೆ.

Leave a Reply

Your email address will not be published.