60 ವರ್ಷದ ವೃದ್ದನನ್ನು ಮದುವೆಯಾದ ಮಹಿಳೆ : ವಾರದೊಳಗೆ ಬಯಲಾಯ್ತು ಅಸಲಿಯತ್ತು !

ಇಂದೋರ್‌ : ವೃದ್ಧಾಪ್ಯದಲ್ಲಿ ಯಾರಾದರು ಜೊತೆಗಿರಲಿ ಎಂದು ಮನಸ್ಸು ಬಯಸುವುದು ಸಹಜ. ಅಂತೆಯೇ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಯುವತಿಯನ್ನು ಮದುವೆಯಾಗಿದ್ದು, ಈತ ಆತ ಪರಿತಪಿಸುವಂತಾಗಿದೆ. ವೃದ್ದನನ್ನು ಮದುವೆಯಾದ ಯುವತಿ ಆತನ ಬಳಿಯಿದ್ದ ಹಣ, ಚಿನ್ನಾಭರಣಗಳನ್ನು ದೋಟಿ ಪರಾರಿಯಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂದೋರ್‌ನ ನಿವಾಸಿಯಾಗಿರುವ ರೂಪ್‌ ದಾಸ್‌ (60) ಎಂಬುವವರು ವಿದ್ಯುತ್‌ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. 1992ರಲ್ಲೇ ಅವರ ಪತ್ನಿ ಮೃತಪಟ್ಟಿದ್ದರು. ಮಕ್ಕಳೂ ಇಲ್ಲದ ಕಾರಣ ಇವರಿಗೆ ಮತ್ತೊಂದು ಮದುವೆಯಾಗುವಂತೆ ಸಲಹೆ ನೀಡಿದ್ದರು.

ವೃದ್ಧಾಪ್ಯದಲ್ಲಿ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ರೂಪ್‌ದಾಸ್‌ ವಿಧವೆಯೊಬ್ಬರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಏಳೇ ದಿನದಲ್ಲಿ ಮಹಿಳೆ ಮನೆಯಲ್ಲಿದ್ದ 3 ಲಕ್ಷರೂ ಹಣ, ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾಳೆ. ಬಳಿಕ ರೂಪ್‌ ದಾಸ್‌ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com