ಮನೆ ಮುಂದೆ ಆಟವಾಡ್ತಿದ್ದ ಬಾಲಕನನ್ನು ಹೊತ್ತೊಯ್ದು ಕೊಂದೇ ಬಿಡ್ತು ಆನೆ….

ಹಾಸನ : ಮನೆ ಮುಂದೆ ನಿಂತಿದ್ ಬಾಲಕನನ್ನು ಒಂಟಿ ಸಲಗವೊಂದು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಭರತ್ (14) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕೊಡಗವತ್ತವಳ್ಳಿ ಗ್ರಾಮದಲ್ಲ ಭರತ್‌ ಅಜ್ಜಿಯ ಮನೆ ಇತ್ತು. ರಜೆಗಾಗಿ ಆತ ಅಜ್ಜಿಯ ಮನೆಗೆ ಬಂದಿದ್ದ. ಅಲ್ಲದೆ ಆತನಿಗೆ ತಂದೆ -ತಾಯಿ ಇರಲಿಲ್ಲ ಎಂದು ತಿಳಿದುಬಂದಿದೆ.
 ಇಂದು ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿರುವಾಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಒಂಟಿ ಸಲಗ ಭರತ್‌ನನ್ನು ಹೊತ್ತೊಯ್ದಿದೆ. ಮನೆ ಬಳಿ ಮೊಮ್ಮಗ ಕಾಣದ ಹಿನ್ನೆಲೆಯಲ್ಲಿ ಆತಂಕಕ್ಕೀಡಾದ ಅಜ್ಜಿ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಭರತ್‌ ಮೃತದೇಹ ಪತ್ತೆಯಾಗಿದೆ.
ವಿಚಾ ತಿಳಿದ ಕೂಡಲೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಆನೆಯನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ.
ಸದ್ಯ ಭರತ್‌ನ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com