ಕನ್ನಡಿಗರು ಹರಾಮಿಗಳು ಎಂದ ಗೋವಾ ಸಚಿವ : ರಾಜ್ಯದೆಲ್ಲೆಡೆ ಆಕ್ರೋಶ

ಪಣಜಿ  : ಗೋವಾ ನೀರಾವರಿ ಸಚಿವ ವಿನೋದ್‌ ಪಾಲೇಕರ್‌ ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಕರ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಶನಿವಾರ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಕಳಸಾ ನಾಲಾ ಕಾಮಗಾರಿ ವೀಕ್ಷಣೆಗೆಂದು ಬಂದು ವಾಪಸ್‌ಗೋವಾಗೆ ತೆರಳಿದ್ದ ಸಚಿವ ಪಾಲೇಕರ್‌, ಮಹದಾಯಿ ವಿಚಾರದಲ್ಲಿ ಕರ್ನಾಟಕ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು ಟ್ವೀಟ್ ಮಾಡಿದ್ದಾರೆ.

ಮಹದಾಯಿ ನಮಗೆ ತಾಯಿಯಿದ್ದಂತೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯದ ಆದೇಶ ಬರುವವರೆಗೆ ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.

ಮಹದಾಯಿ ನದಿ ನೀರಿನ ವಿವಾದದಲ್ಲಿ ಗೋವಾ ಸಿಎಂ ಮನೋಹಕ್ ಪರ್ರಿಕ್ಕರ್‌, ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈ ಕುರಿತು ಟ್ವೀಟ್‌ ಮಾಡಿರುವ ಪಾಲೇಕರ್‌ ಈ ಪತ್ರವೇ ನ್ಯಾಯಾಲಯದ ಆದೇಶವೇನಲ್ಲ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ಅದರಿಂದ ನಮಗೆ ಸಂಬಂಧವಿಲ್ಲ ಎಂದಿದ್ದಾರೆ.

ಇನ್ನು ಪಾಲೇಕರ್‌ ಅವರ ವಿವಾದಾತ್ಮಕ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದು. ಮಹದಾಯಿ ವಿಚಾರದಲ್ಲ ಮೋದಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com