ಸಮಸ್ಯೆ ಇತ್ಯರ್ಥಕ್ಕೆ ಹೊರಗಿನವರ ಮಧ್ಯಪ್ರವೇಶ ಬೇಡ : ನ್ಯಾ. ಜೋಸೆಫ್ ಕುರಿಯನ್
ದೆಹಲಿ : ಸುಪ್ರೀ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸುಪ್ರೀಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು ಸಮಸ್ಯೆಯ ಇತ್ಯರ್ಥಕ್ಕೆ ಹೊರಗಿನವರ ಮಧ್ಯಪ್ರವೇಶ ಬೇಡ ಎಂದಿದ್ದಾರೆ.
ಈ ಕುರಿತು ನ್ಯಾಯಮೂರ್ತಿ ಕುರಿಯೆನ್ ಜೋಸೆಫ್ ಹೇಳಿಕೆ ನೀಡಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಇದರಲ್ಲಿ ಹೊರಗಿನವರು ಮಧ್ಯಪ್ರವೇಶಿಸುವುದು ಬೇಕಿಲ್ಲ. ಸರ್ವೋಚ್ಛ ನ್ಯಾಯಾಲಯದಲ್ಲಿ ಯಾವುದೇ ಸಂವಿಧಾನಿಕ ಬಿಕ್ಕಟ್ಟಿಲ್ಲ. ನಿಯಮ ರೂಪಿಸುವಲ್ಲಿ ತೊಂದರೆ ಇದ್ದು, ಅದಕ್ಕೆ ನಾವು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ.
ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ ಮರುದಿನ ಬಾರ್ ಕೌನ್ಸಿಲ್ ಇದಕ್ಕೆ ಪ್ರತಿಕ್ರಿಯಸಿದ್ದು, ಸುಪ್ರೀಂಕೋರ್ಟ್ನಲ್ಲಿ ಬಿಕ್ಕಟ್ಟು ತಲೆದೂರಿರುವುದು ದುರದೃಷ್ಟಕರ ಎಂದಿತ್ತು. ಅಲ್ಲದೆ ಈ ಅಸಮಾಧಾನದ ಶಮನಕ್ಕಾಗಿ 7 ಮಂದಿಯ ಸಮಿತಿ ರಚಿಸಿತ್ತು.
ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಇಬ್ಬರು ನ್ಯಾಯಾಧೀಶರು ಉಲ್ಟಾ ಹೊಡೆದಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಎಂದಿದ್ದಾರೆ.