ಶಿಷ್ಟಾಚಾರ ಬದಿಗಿಟ್ಟು ಇಸ್ರೇಲ್‌ ಪ್ರಧಾನಿಗೆ ಸ್ವಾಗತ ಕೋರಲಿದ್ದಾರೆ ಮೋದಿ

ದೆಹಲಿ : 15 ವರ್ಷಗಳ ಬಳಿಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತಾನ್ಯಾಹು ಭಾರತಕ್ಕೆ ಆಗಮಿಸುತ್ತಿದ್ದು, ಶಿಷ್ಟಾಚಾರವನ್ನು ಬದಿಗಿಟ್ಟು ಪ್ರಧಾನಿ ಮೋದಿ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಸ್ನೇಹಿತನನ್ನು ಸ್ವಾಗತಿಸಲಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಜನವರಿ 14ರಂದು ಮದ್ಯಾಹ್ನ ನೇತಾನ್ಯಾಹು ಭಾರತಕ್ಕೆ ಆಗಮಿಸಲಿದ್ದು, 15 ವರ್ಷಗಳ ಬಳಿಕ ಇಸ್ರೇಲ್‌ ಪ್ರಧಾನಿಯೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಕಳೆದ ವರ್ಷ ಪ್ರಧಾನಿ ಮೋದಿ ಜುಲೈನಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಇಸ್ರೇಲ್ ಪ್ರಧಾನಿ ಸಹ ಶಿಷ್ಟಾಚಾರವನ್ನು ಬದಿಗಿರಿಸಿ ಮೋದಿಯವರನ್ನು ಸ್ವಾಗತಿಸಿದ್ದರು. ಅಲ್ಲದೇ ಅಮೆರಿಕ ಅಧ್ಯಕ್ಷರು ಹಾಗೂ ಧಾರ್ಮಿಕ ಗುರುಗಳಿಗೆ ಸಲ್ಲುವಂತಹ ಗೌರವ ನೀಡಿದ್ದರು.
ನೇತಾನ್ಯಾಹು ಭಾರತಕ್ಕೆ ಆಗಮಿಸುತ್ತಿದ್ದಂತೆ ಪ್ರಧಾನಿ ಮೋದಿ ಜೊತೆಗೆ ತೀನ್‌ ಮೂರ್ತಿ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಅನೇಕ ವರ್ಷಗಳ ಹಿಂದೆ ಭಾರತದ ಮೂರು ರೆಜಿಮೆಂಟ್‌ಗಳು ಹೈಫಾ ಯುದ್ದದಲ್ಲಿ ವಹಿಸಿದ್ದ ಪಾತ್ರದ ಸ್ಮರಣಾರ್ಥವಾಗಿ ಈ ಸ್ಮಾರಕ ನಿರ್ಮಿಸಲಾಗಿದ್ದು, ಇದಕ್ಕೆ ತೀನ್‌ ಮೂರ್ತಿ ಹೈಫಾ ಚೌಕ್‌ ಎಂದು ಮರುನಾಮಕರಣ ಮಾಡಲಾಗುವುದಾಗಿ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com