ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ : CM ಸಿದ್ಧರಾಮಯ್ಯ

ದೆಹಲಿ : ಕಾವೇರಿ ನೀರು ಬಿಡುವಂತೆ ತಮಿಳುನಾಡು ಕರ್ನಾಟಕಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿಗೆ ನೀರು ಬಿಡಲು‌ ಸಾಧ್ಯವಿಲ್ಲ. ನಮಗೇ ನೀರಿಲ್ಲದಿರುವುದರಿಂದ ನೀರು ಬಿಡಲಾಗದು. ಮುಂದಿನ‌ ತಿಂಗಳು ಕಾವೇರಿ ತೀರ್ಪು ಬರಲಿದೆ. ನಮ್ಮ ಪರವೇ ತೀರ್ಪು ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

ಇನ್ನ ಮಹದಾಯಿ ವಿಚಾರದಲ್ಲಿ ಸಭೆಯಲ್ಲಿ ಎಲ್ಲರೊಂದಿಗೆ ಮಾಚನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಪ್ರಧಾನಿ ಮೋದಿ ಮಧ್ಯಪ್ರವೇಶದಿಂದ ಮಾತ್ರ ಮಹದಾಯಿ ಸಮಸ್ಯೆಗೆ ಪರಿಹಾರ ಸಾಧ್ಯ. ಇದನ್ನು ಬಿಜೆಪಿಯವರು ಮೋದಿಗೆ ವಮನವರಿಕೆ ಮಾಡಲಿ ಎಂದಿದ್ದಾರೆ.

 

Leave a Reply

Your email address will not be published.