Cricket U-19 ವಿಶ್ವಕಪ್ : ಆಸೀಸ್ ವಿರುದ್ಧ 100 ರನ್ ಜಯ, ಭಾರತದ ಶುಭಾರಂಭ

ನ್ಯೂಜಿಲೆಂಡಿನ ಮೌಂಟ್ ಮೌಂಗಾನುಯಿಯಲ್ಲಿ ರವಿವಾರ ಅಂಡರ್-19 ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದೆ. ಭಾನುವಾರ ನಡೆದ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ಕಿರಿಯರ ತಂಡ, ಆಸ್ಟ್ರೇಲಿಯಾ ವಿರುದ್ಧ ಭರ್ಜರಿ 100 ರನ್ ಅಂತರದ ಜಯಗಳಿಸಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಪೃಥ್ವಿ ಶಾ (94), ಮನೋಜ್ ಕಾಲ್ರಾ (86) ಹಾಗೂ ಶುಭಮ್ ಗಿಲ್ (63) ಅವರ ಅರ್ಧಶತಕಗಳ ನೆರವಿನಿಂದ ಭಾರತ ನಿಗದಿತ 50 ಓವರುಗಳಲ್ಲಿ 328 ರನ್ ಬೃಹತ್ ಮೊತ್ತ ಕಲೆಹಾಕಿತು. ಆಸೀಸ್ ಪರವಾಗಿ ಜ್ಯಾಕ್ ಎಡ್ವರ್ಡ್ಸ್ 4 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 228 ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 100 ರನ್ ಸೋಲೊಪ್ಪಿಕೊಂಡಿತು. ಜ್ಯಾಕ್ ಎಡ್ವರ್ಡ್ಸ್ 73, ಜೋನಾಥನ್ ಮರ್ಲೊ 38 ರನ್ ಗಳಿಸಿದರು. ಭಾರತದ ಪರವಾಗಿ ಶಿವಮ್ ಮವಿ ಹಾಗೂ ಕಮಲೇಶ್ ನಗರಕೋಟಿ ತಲಾ 3 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com