Cricket : ದ.ಆಫ್ರಿಕಾ 335ಕ್ಕೆ ಆಲೌಟ್ : ಭಾರತಕ್ಕೆ ಕೊಹ್ಲಿ, ವಿಜಯ್ ಆಸರೆ

ಸೆಂಚುರಿಯನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮುರಳಿ ವಿಜಯ್ ಆಸರೆಯಾಗಿದ್ದಾರೆ. ತಾಳ್ಮೆಯ ಬ್ಯಾಟಿಂಗ್ ನಡೆಸಿದ ಕೊಹ್ಲಿ, ವಿಜಯ್ ಅರ್ಧಶತಕಗಳ ನೆರವಿನಿಂದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾ ಪರವಾಗಿ ಮಾರ್ನ್ ಮಾರ್ಕೆಲ್, ಕಗಿಸೋ ರಬಾಡಾ, ಕೇಶವ್ ಮಹಾರಾಜ್, ಲುಂಗಿಸಾನಿ ತಲಾ 1 ವಿಕೆಟ್ ಪಡೆದರು. ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಇನ್ನೂ 152 ರನ್ ಹಿನ್ನಡೆಯಲ್ಲಿದೆ. ದಿನದಾಟ ಮುಕ್ತಾಯವಾದಾಗ ವಿರಾಟ್ ಕೊಹ್ಲಿ (85*) ಹಾಗೂ ಹಾರ್ದಿಕ್ ಪಾಂಡ್ಯ (11*) ಅಜೇಯರಾಗುಳಿದಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 335 ಕ್ಕೆ ಆಲೌಟ್ ಆಯಿತು. ಮೊದಲ ದಿನ ಅಜೇಯರಾಗುಳಿದಿದ್ದ ಫಾಫ್ ಡು ಪ್ಲೆಸಿಸ್ 63 ರನ್ ಗಳಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಭಾರತದ ಪರವಾಗಿ ರವಿಚಂದ್ರನ್ ಅಶ್ವಿನ್ 4, ಇಶಾಂತ್ ಶರ್ಮಾ 3 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com