ಈ ಬಾಲಿವುಡ್ ಬ್ಯೂಟಿಯೊಂದಿಗೆ Hardik Pandya ಡೇಟಿಂಗ್ ಅಂತೆ..!

ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸದಾ ಸುದ್ದಿಯಲ್ಲಿರುವ ಕಲರ್ ಫುಲ್ ವ್ಯಕ್ತಿತ್ವ ಹೊಂದಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಿಂದಾಗಿ ಮಿಂಚುವ ಹಾರ್ದಿಕ್, ಬೇರೆ ವಿಷಯಗಳಿಗಾಗಿಯೂ ಸುದ್ದಿಯಲ್ಲಿರುತ್ತಾರೆ.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರೊಂದಿಗೆ ಪಾಂಡ್ಯ ಡೇಟಿಂಗ್ ನಡೆಸಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಆಮೇಲೆ ಇಬ್ಬರೂ ಈ ಗಾಳಿಸುದ್ದಿಯನ್ನು ನಿರಾಕರಿಸಿದ್ದರು. ಈಗ ಮತ್ತೊಬ್ಬ ಬಾಲಿವುಡ್ ನಟಿ ಎಲ್ಲೀ ಅವ್ರಾಮ್ ಅವರೊಂದಿಗೆ ಹಾರ್ದಿಕ್ ಡೇಟಿಂಗ್ ಶುರುಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Image result for hardik pandya elli avram

Image result for hardik pandya elli avram

Related image

ಇತ್ತೀಚೆಗೆ ಮುಂಬೈನಲ್ಲಿ ನಡೆದ ಹಾರ್ದಿಕ್ ಸೋದರ ಕೃಣಾಲ್ ಪಾಂಡ್ಯ ಅವರ ಮದುವೆಯಲ್ಲಿ ಎಲ್ಲೀ ಕಾಣಿಸಿಕೊಂಡಿದ್ದರು. ಹಾರ್ದಿಕ್ ಅಥವಾ ಎಲ್ಲೀ ಈ ವಿಷಯವನ್ನು ಎಲ್ಲಿಯೂ ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಮಿಕ್ಕೀ ವೈರಸ್ ಚಿತ್ರದಲ್ಲಿ ನಟಿಸಿರುವ ಎಲ್ಲೀ ಅವ್ರಮ್, ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com