ಮೃತ ಕಂದನಿಗಾಗಿ ತಾಯಿಯಾನೆ ಹುಡುಕಾಟ : ಮನಕಲಕೋ ಘಟನೆಗೆ ಸಾಕ್ಷಿಯಾಯ್ತು ಬಂಡೀಪುರ

ಚಾಮರಾಜನಗರ : ತನ್ನ ಮರಿ ಮೃತಪಟ್ಪಿರುವ ವಿಚಾರವೇ ತಿಳಿಯದ ಆನೆಯೊಂದು ಆನೆ ಮರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ಚಾಮರಾಜನಗರ ಜಿಲ್ಲೆ ಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಅರಣ್ಯ ಪ್ರದೇಶದ ಓಂಕಾರ ವಲಯದ ಕಾಡಂಚಿನ ಕುರುಬರಹುಂಡಿ ಬಳಿ ಕಂಡು ಬಂದಿದೆ.

ಜನವರಿ 1 ರಂದು ಕುರುಬರ ಹುಂಡಿ ಗ್ರಾಮದ ಬಳಿಗೆ ಬಂದಿದ್ದ ಆನೆಗಳ ಹಿಂಡಿನಲ್ಲಿ ಆನೆಮರಿಯೊಂದು ತಾಯಿಯಿಂದ ಬೇರ್ಪಟ್ಟಿತ್ತು. ಈ ವೇಳೆ ಅರಣ್ಯ ಅಧಿಕಾರಿಗಳು ಮರಿ ಆನೆಯನ್ನು ರಕ್ಷಿಸಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಇರಿಸಿ ಕೊಂಡಿದ್ದರು. ಇದಾದ ಬಳಿಕ ತಾಯಿಯಿಂದ ದೂರವಾಗಿದ್ದ ಮರಿಯಾನೆ ತೀವ್ರ ಜ್ವರದಿಂದ ಮೃತ ಪಟ್ಟಿತ್ತು. ತನ್ನ ಮರಿಯನ್ನು ಕಳೆದುಕೊಂಡಿರುವ ತಾಯಿ ಆನೆ ಇದೀಗ ಕಂಗಾಲಾಗಿದ್ದು, ತನ್ನ ಮರಿಗಾಗಿ ಪ್ರತಿ ನಿತ್ಯವೂ ಕಾಡಿನಿಂದ ಈ ಗ್ರಾಮಕ್ಕೆ ಬಂದು ಮರಿಗಾಗಿ ಹುಡುಕಾಡುತ್ತಿದೆ. ಗ್ರಾಮಕ್ಕೆ ಪ್ರತಿ ನಿತ್ಯ ಈ ಆನೆ ಬರುತ್ತಿರುವುದರಿಂದ ಗ್ರಾಮಸ್ಥರು ಗಾಬರಿಗೊಂಡು ಆನೆಯನ್ನು ಕಾಡಿಗೆ ಓಡಿಸುವ ಪ್ರ ಯತ್ನ ಮಾಡುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com